ಕರ್ನಾಟಕ

karnataka

By

Published : May 7, 2021, 12:39 PM IST

ETV Bharat / state

ಮೀನುಗಳನ್ನು ರಸ್ತೆಗೆ ಚೆಲ್ಲಿದ ಅಧಿಕಾರಿ: ಮಾರಾಟಗಾರರಿಂದ ಹಿಡಿಶಾಪ

ಇಂದು ವ್ಯಾಪಾರ-ವಹಿವಾಟಿನ ಅವಧಿ ಮುಗಿದರೂ ಕೆಲ ಮೀನುಗಾರ ಮಹಿಳೆಯರು ಮೀನು ಮಾರಾಟ ಮಾಡತೊಡಗಿದ್ದರು ಎಂದು ನಗರಸಭೆ ಸಿಬ್ಬಂದಿ ನಿಲೇಶ್ ಮೀನು ಬುಟ್ಟಿ ಕಸಿದು ಮೀನುಗಳನ್ನು ನೆಲಕ್ಕೆ ಚೆಲ್ಲಿದ್ದಾರೆ. ಆದ್ರೆ ವ್ಯಾಪಾರ ಬಂದ್ ಮಾಡಿ ಮನೆಗೆ ತೆರಳಲು ಬುಟ್ಟಿ ಬದಿಗೆ ಇಟ್ಟಿದ್ದನ್ನು ಎಳೆದು ಚೆಲ್ಲಿದ್ದಾರೆ ಎಂದು ಮೀನು ಮಾರಾಟಗಾರರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Officers spilled fish on the road in karawara
ಮೀನನ್ನು ರಸ್ತೆಗೆ ಚೆಲ್ಲಿದ ಅಧಿಕಾರಿಗಳು: ಮಾರಾಟಗಾರರಿಂದ ಹಿಡಿಶಾಪ!

ಕಾರವಾರ: ಅವಧಿ ಮುಗಿದ ಬಳಿಕವೂ ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರ ಮೀನು ಬುಟ್ಟಿ ಕಸಿದುಕೊಂಡ ನಗರಸಭೆ ಸಿಬ್ಬಂದಿ ಮೀನಗಳನ್ನು ರಸ್ತೆಗೆ ಚೆಲ್ಲಿರುವ ಘಟನೆ ಕಾರವಾರದಲ್ಲಿ ನಡೆದಿದೆ.

ಮೀನನ್ನು ರಸ್ತೆಗೆ ಚೆಲ್ಲಿದ ಅಧಿಕಾರಿ: ಮಾರಾಟಗಾರರಿಂದ ಹಿಡಿಶಾಪ!

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನಗರದ ಮುಖ್ಯ ಮೀನು ಮಾರುಕಟ್ಟೆ ಬಂದ್ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಇವರು ಮೀನು ಮಾರಾಟ ಮಾಡುತ್ತಿದ್ದರು. ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ 10 ಗಂಟೆಯವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದ್ರೆ ಇಂದು ಅವಧಿ ಮುಗಿದರೂ ಕೆಲ ಮೀನುಗಾರ ಮಹಿಳೆಯರು ನಗರದ ಆಯುಷ್​​ ಆಸ್ಪತ್ರೆ ಎದುರು ಮೀನು ಮಾರಾಟ ಮಾಡತೊಡಗಿದ್ದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ನಗರಸಭೆ ಸಿಬ್ಬಂದಿ ನಿಲೇಶ್ ಎಂಬುವವರು ಬಂದ್ ಮಾಡುವಂತೆ ಎಚ್ಚರಿಸುವ ಬದಲು ಮೀನುಗಾರ ಮಹಿಳೆಯರು ವ್ಯಾಪಾರಕ್ಕೆ ತಂದಿದ್ದ ಮೀನುಗಳನ್ನು ರಸ್ತೆಗೆ ಎಸೆದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಮೀನು ಮಾರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಗವಿಮಠದ ಹಾಸ್ಟೆಲ್​ನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಒಪ್ಪಿಗೆ

ಪೊಲೀಸರ ಎದುರು ನಗರಸಭೆ ಸಿಬ್ಬಂದಿ ಈ ರೀತಿ ದರ್ಪ ತೋರಿದ್ದಾರೆ. ನಾವು ಸಾವಿರಾರು ರೂ. ವ್ಯಯಿಸಿ ಮೀನು ತಂದು ಮಾರಾಟ ಮಾಡುತ್ತೇವೆ. ಬಂದ್ ಮಾಡಿ ಮನೆಗೆ ತೆರಳಲು ಬುಟ್ಟಿ ಬದಿಗೆ ಇಟ್ಟಿದ್ದನ್ನು ಎಳೆದು ಚೆಲ್ಲಿದ್ದಾರೆ ಎಂದು ಮೀನು ಮಾರಾಟಗಾರರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details