ಕಾರವಾರ: ಕುಮಟಾ ಪಟ್ಟಣದ ವಿದ್ಯಾಧೀರಾಜ ಪಾಲಿಟೆಕ್ನಿಕ್ ಕಾಲೇಜಿನ ಬಳಿ ನಿನ್ನೆ ರಾತ್ರಿ ಪತ್ತೆಯಾಗಿದ್ದ ಬಾಂಬ್ ಮಾದರಿಯ ವಸ್ತುವನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ನಿಷ್ಕ್ರಿಯಗೊಳಿಸಿದರು. ಇದೊಂದು ಡಮ್ಮಿ ಬಾಂಬ್ ಎಂದು ಸಾಬೀತಾದ ಕಾರಣ ಸ್ಥಳೀಯರ ಆತಂಕ ದೂರವಾಯಿತು.
ಬುಧವಾರ ಸಂಜೆ ಕಾಲೇಜ್‌ನ ಹಿಂಭಾಗದಲ್ಲಿ ಬಾಂಬ್ ಹೋಲುವ ವಸ್ತುವನ್ನು ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಕಾಲೇಜ್ ಸುತ್ತಲೂ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು. ಅನುಮಾನಾಸ್ಪದ ವಸ್ತು ನೋಡಲು ಬಾಂಬ್ ರೀತಿ ಇದ್ದ ಕಾರಣ ಪೊಲೀಸರು ಕೂಡ ಆ ವಸ್ತುವಿನ ಬಳಿ ತೆರಳಲು ಹಿಂದೇಟು ಹಾಕಿದ್ದು ಕಂಡುಬಂದಿದೆ.