ಕರ್ನಾಟಕ

karnataka

ETV Bharat / state

ಅಂಕೋಲಾದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣು: ಕಾರಣ ನಿಗೂಢ - ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ಒಕ್ಕಲಕೇರಿಯಲ್ಲಿ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿವೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ನರ್ಸಿಂಗ್ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
Nursing student committed suicide at Karwar

By

Published : Dec 9, 2020, 12:06 PM IST

ಕಾರವಾರ:ಪರೀಕ್ಷೆ ಬರೆಯಲು ತೆರಳಬೇಕಿದ್ದ ನರ್ಸಿಂಗ್ ವಿದ್ಯಾರ್ಥಿವೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ಒಕ್ಕಲಕೇರಿಯಲ್ಲಿ ನಡೆದಿದೆ.

ನಾಗರತ್ನ ಗೌಡ (21) ನೇಣಿಗೆ ಶರಣಾಗಿರುವ ವಿದ್ಯಾರ್ಥಿನಿ. ಉಳವರೆಯ ಬೊಳಕುಂಟೆ ಗ್ರಾಮದ ಈಕೆ, ಹಾರವಾಡದ ತನ್ನ ಅಜ್ಜಿಯ ಮನೆಯಲ್ಲಿ 5ನೇ ತರಗತಿಯಿಂದಲೇ ವಾಸವಾಗಿದ್ದಳು. ಕಲಿಕೆಯಲ್ಲೂ ಮುಂದಿದ್ದ ಯುವತಿ ಬಾರದ ಲೋಕಕ್ಕೆ ತೆರಳಿದ್ದಾಳೆ.

ಓದಿ: ಬಿಜೆಪಿಯ ಹಿರಿಯ ನಾಯಕ ಎಸ್ ಆರ್ ಪಿಕಳೆ ನಿಧನ : ಸಚಿವ ಶಿವರಾಮ್ ಹೆಬ್ಬಾರ್ ಕಂಬನಿ

ಸೋಮವಾರ ನರ್ಸಿಂಗ್ ಕೋರ್ಸ್ ಪರೀಕ್ಷೆ ಬರೆದು ಬಂದಿದ್ದ ಈಕೆ, ನಿನ್ನೆ ಪರೀಕ್ಷೆಗೆ ತೆರಳದೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಸಿಪಿಐ ಕೃಷ್ಣಾನಂದ ನಾಯಕ್​, ಪಿಎಸ್​​ಐ ಸಂಪತ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details