ಕಾರವಾರ:ಜನವರಿ 1 ರಿಂದ ಶಾಲೆಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಆದ್ರೆ ಮಕ್ಕಳನ್ನು ಒತ್ತಾಯದಿಂದ ಕರೆತರುವ ಪದ್ಧತಿ ಇಲ್ಲ. ಪಾಲಕರಿಂದ ಒಪ್ಪಿಗೆ ಪತ್ರ ಪಡೆದು ಬಂದವರಿಗೆ ಪಾಠ ಮಾಡಲಾಗುತ್ತದೆ ಎಂದು ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನವರಿ 1 ರಿಂದ ಶಾಲೆ ಪ್ರಾರಂಭಿಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಆದರೆ ಶಾಲೆಗೆ ಬರುವ ಮಕ್ಕಳಿಗೆ ಪಾಲಕರಿಂದ ಒಪ್ಪಿಗೆ ಪತ್ರ ತರುವುದು ಕಡ್ಡಾಯವಾಗಿದ್ದು, ಯಾವ ಮಕ್ಕಳನ್ನೂ ಒತ್ತಾಯದಿಂದ ಇಲ್ಲವೇ, ಒತ್ತಡ ಹೇರಿ ಕರೆತರುವ ಪ್ರಶ್ನೆಯೇ ಇಲ್ಲ. ಯಾವ ಪಾಲಕರು ತಮ್ಮ ಮಕ್ಕಳು ಓದಬೇಕು ಎಂದುಕೊಂಡಿದ್ದಾರೋ ಅವರು ಕಳುಹಿಸಬಹುದು ಎಂದರು.