ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ಲಾಕ್‌ಡೌನ್‌ ಸಡಿಲಿಕೆ.. ಸಂಜೆ 7ರವರೆಗೂ ವ್ಯಾಪಾರ,ವಹಿವಾಟಿಗೆ ಅವಕಾಶ.. - ಭಟ್ಕಳ ಉತ್ತರ ಕನ್ನಡ ಲೆಟೆಸ್ಟ್ ನ್ಯೂಸ್

ಸದ್ಯ ಹೊರಗಿನಿಂದ ಬಂದವರಲ್ಲಿ‌ ಮಾತ್ರ ಕೊರೊನಾ ಕಂಡು ಬಂದ ಹಿನ್ನೆಲೆ ಜಿಲ್ಲಾಡಳಿತ ಸಾರ್ವಜನಿಕರಿಗೆ, ಅಂಗಡಿಕಾರರಿಗೆ ಇನ್ನಷ್ಟು ಸಡಿಲಿಕೆಗೆ ಅನುವು ಮಾಡಿದೆ ಹೊರತು ಇದನ್ನು ಸರಳವಾಗಿ ತೆಗೆದುಕೊಳ್ಳದೆ ಸರ್ಕಾರದ ಕಟ್ಟುನಿಟ್ಟಿನ ಆದೇಶ ಪಾಲನೆ ಮಾಡಲೇಬೇಕಿದೆ.

Lock down rule
Lock down rule

By

Published : Jun 7, 2020, 10:57 PM IST

ಭಟ್ಕಳ: ಹಾಟ್‌ಸ್ಪಾಟ್ ಆಗಿದ್ದ ಭಟ್ಕಳದಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗಿರುವ ಹಿನ್ನಲೆ ಜಿಲ್ಲಾಡಳಿತ ನಾಳೆಯಿಂದ ನಿಯಮಗಳಲ್ಲಿ ಇನ್ನಷ್ಟು ಸಡಿಲಿಕೆ ನೀಡಿದೆ. ಅಂಗಡಿ ತೆರೆಯುವ ಅವಧಿಯನ್ನೂ ವಿಸ್ತರಣೆ ಮಾಡಲಾಗಿದೆ.

ಬೆಳಗ್ಗೆ 7ರಿಂದ ಸಂಜೆ 7ರ ತನಕ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಬಂಧಿಯಾಗಿದ್ದ ಜನರಿಗೆ ಸರ್ಕಾರ ನಿಯಮಗಳಲ್ಲಿ ಸಡಿಲಿಕೆ ನೀಡುತ್ತಿದೆ. ಇದರಂತೆ ತಾಲೂಕಿನಲ್ಲಿಯೂ ನಿಯಮ ಸಡಿಲಿಕೆ ಮಾಡಲಾಗುತ್ತಿದೆ. ಕಳೆದ ಕೆಲ‌‌ ದಿನದಿಂದ ತಾಲೂಕಿನಲ್ಲಿ ಆಯ್ದ ಅಂಗಡಿಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿತ್ತು.

ಜೂನ್‌ 1ರಿಂದ ಇನ್ನಷ್ಟು ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು. ಜನರಿಗೆ ಲಾಕ್‌ಡೌನ್‌ನಿಂದ ಮುಕ್ತಗೊಳಿಸಿ ನಿಗದಿತ ಸಮಯದವರೆಗೆ ಓಡಾಟ, ವ್ಯಾಪಾರ-ವಹಿವಾಟಿಗೆ ಅವಕಾಶ ನೀಡಿ ಆದೇಶ ಮಾಡಲಾಗಿತ್ತು. ಇಷ್ಟು ದಿನ ಬೆಳಗ್ಗೆ 8 ರಿಂದ 2 ಗಂಟೆಯವರೆಗೆ ಇದ್ದ ಸಮಯ ನಾಳೆ ಇಂದ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಡಿಲಿಕೆ ಮಾಡಿ ಆದೇಶವನ್ನು ಜಿಲ್ಲಾಧಿಕಾರಿಗಳು ಘೋಷಿಸಿದ ಬೆನ್ನಲ್ಲೇ ಉಪವಿಭಾಗಾಧಿಕಾರಿ ಭರತ್‌ ಎಸ್‌ ತಿಳಿಸಿದ್ದಾರೆ.

ಸದ್ಯ ಹೊರಗಿನಿಂದ ಬಂದವರಲ್ಲಿ‌ ಮಾತ್ರ ಕೊರೊನಾ ಕಂಡು ಬಂದ ಹಿನ್ನೆಲೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಅಂಗಡಿಕಾರರಿಗೆ ಇನ್ನಷ್ಟು ಸಡಿಲಿಕೆಗೆ ಅನುವು ಮಾಡಿದೆ ಹೊರತು, ಇದನ್ನು ಜನ ಸರಳವಾಗಿ ತೆಗೆದುಕೊಳ್ಳದೆ ಸರ್ಕಾರದ ಕಟ್ಟುನಿಟ್ಟಿನ ಆದೇಶ ಪಾಲನೆ ಮಾಡಲೇಬೇಕಿದೆ. ಖಾಸಗಿ ಬಸ್, ಟೆಂಪೋ ಓಡಾಟಕ್ಕೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ತಿಳಿಸಲಾಗುವುದು. ಜನ ಮಾಸ್ಕ್ ಹಾಕುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದರು.

ABOUT THE AUTHOR

...view details