ಕಾರವಾರ: ಕಳೆದ ಮೂರ್ನಾಲ್ಕು ದಿನಗಳಿಂದ ನಿತ್ಯವೂ ಕೊರೊನಾ ಸೋಂಕಿತರು ಪತ್ತೆಯಾಗುವ ಮೂಲಕ ಆತಂಕಕ್ಕೆ ಕಾರಣವಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಜನರು ಯಾವುದೇ ಪ್ರಕರಣ ಪತ್ತೆಯಾಗದಿರುವುದಕ್ಕೆ ಇಂದು ನಿರಾಳರಾಗಿದ್ದಾರೆ.
ಹೆಚ್ಚುತ್ತಿದ್ದ ಸೋಂಕಿತರ ಸಂಖ್ಯೆಗೆ ಬಿತ್ತು ಕಡಿವಾಣ: ನಿಟ್ಟುಸಿರು ಬಿಟ್ಟ ಉತ್ತರ ಕನ್ನಡದ ಜನ - Kannada district case
ಹೆಚ್ಚುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆಗೆ ಕಾರವಾರ ಜಿಲ್ಲೆಯಲ್ಲಿ ಇಂದು ಬ್ರೇಕ್ ಬಿದ್ದಿದೆ. ಇದರಿಂದ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆ
ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಬರುತ್ತಿದ್ದಂತೆ ಆತಂಕಗೊಳ್ಳುತ್ತಿದ್ದ ಜಿಲ್ಲೆಯ ಜನರಿಗೆ ಇಂದು ತುಸು ನೆಮ್ಮದಿ ನೀಡಿದೆ. ಈಗಾಗಲೇ ಜಿಲ್ಲೆಯ ಭಟ್ಕಳದಲ್ಲಿ 28 ಪ್ರಕರಣಗಳು ಸಕ್ರಿಯವಾಗಿದ್ದು, ಇನ್ನಷ್ಟು ಗಂಟಲು ದ್ರವದ ವರದಿಗಳು ಬರುವುದು ಬಾಕಿ ಇದೆ. ಆದರೆ 11 ಜನರು ಗುಣಮುಖರಾದ 21 ದಿನಗಳ ಬಳಿಕ ಏಕಾಏಕಿ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಇನ್ನಷ್ಟು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ.