ಕರ್ನಾಟಕ

karnataka

ETV Bharat / state

ಬಸ್​ಗಾಗಿ ಕಾಯುತ್ತಿದ್ದವರಿಗೆ ಗುದ್ದಿದ ಬೈಕ್​: ಒಂಬತ್ತು ತಿಂಗಳ ಕಂದಮ್ಮ ಕೊನೆಗೂ ಸಾವು - karwar accident news

ಕುಮಟಾ ತಾಲೂಕಿನ ಗೋಕರ್ಣದ ಗಂಗಾವಳಿ ಬಳಿ ಕುಡಿದ ಅಮಲಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ವ್ಯಕ್ತಿಯೋರ್ವ ಆಸ್ಪತ್ರೆಗೆ ತೆರಳಲು ನಿಂತಿದ್ದವರಿಗೆ ಗುದ್ದಿದ್ದಾನೆ. ಈ ವೇಳೆ ಗಾಯಗೊಂಡಿದ್ದ ಐದು ಮಂದಿ ಪೈಕಿ ಒಂಬತ್ತು ತಿಂಗಳ ಮಗು ಸಾವಿಗೀಡಾಗಿದೆ.

ಬಸ್​ಗಾಗಿ ಕಾಯುತ್ತಿದ್ದವರಿಗೆ ಗುದ್ದಿದ ಬೈಕ್
ಬಸ್​ಗಾಗಿ ಕಾಯುತ್ತಿದ್ದವರಿಗೆ ಗುದ್ದಿದ ಬೈಕ್

By

Published : Jan 17, 2021, 4:10 PM IST

ಕಾರವಾರ:ಆಸ್ಪತ್ರೆಗೆ ತೆರಳಲು ಬಸ್​ಗಾಗಿ ಕಾಯುತ್ತಿದ್ದಾಗ ಬೈಕ್ ಸವಾರ ಗುದ್ದಿ ಗಂಭೀರವಾಗಿ ಗಾಯಗೊಂಡಿದ್ದ, ಐದು ಮಂದಿ ಪೈಕಿ ಒಂಬತ್ತು ತಿಂಗಳ ಕಂದಮ್ಮ ಕೊನೆಗೂ ಮೃತಪಟ್ಟಿದೆ.

ಕುಮಟಾ ತಾಲೂಕಿನ ಗೋಕರ್ಣದ ಗಂಗಾವಳಿ ಬಳಿ ಕುಡಿದ ಅಮಲಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ವ್ಯಕ್ತಿಯೋರ್ವ ಆಸ್ಪತ್ರೆಗೆ ತೆರಳಲು ನಿಂತಿದ್ದವರಿಗೆ ಗುದ್ದಿದ್ದಾನೆ. ಪರಿಣಾಮ ಮೂವರು ಮಕ್ಕಳು ಸಹಿತ ಐವರು ಗಂಭೀರವಾಗಿ ಗಾಯಗೊಂಡಿದ್ದರು. ಅದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಒಂಬತ್ತು ತಿಂಗಳ ಕಂದಮ್ಮಗೆ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗೋವಾದ ಬಾಂಬೋಲಿಗೆ ಕರೆದೊಯ್ಯಲಾಗಿತ್ತು.

ಓದಿ:ಎಣ್ಣೆ ನಶೆಯಲ್ಲಿ ಬಸ್​​ಗಾಗಿ ಕಾಯುತ್ತಿದ್ದವರಿಗೆ ಗುದ್ದಿದ ಬೈಕ್ ಸವಾರ, ಐವರಿಗೆ ಗಾಯ

ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಂದಮ್ಮ ಸಾವನ್ನಪ್ಪಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರು ಮಕ್ಕಳು ಓರ್ವ ಮಹಿಳೆ ಹಾಗೂ ಬೈಕ್ ಸವಾರನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯಾದಿಂದ ಪಾರಾಗಿದ್ದಾರೆ. ಆದರೆ ಕಂದಮ್ಮನ ಸಾವಿಗೆ ಇದೀಗ ಈಡೀ ಜಿಲ್ಲೆಯ ಜನರು ಮರುಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇದ್ದಿದ್ದರೆ ಮಗುವನ್ನು ಉಳಿಸಿಕೊಳ್ಳಬಹುದಿತ್ತು. ದೂರದ ಗೋವಾಗೆ ಕೊಂಡೊಯ್ಯುವಾಗ ಸಮಯ ಮೀರಿದ್ದರಿಂದ ಮಗು ಪ್ರಾಣಕಳೆದುಕೊಳ್ಳುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details