ಭಟ್ಕಳ:ಐಸಿಸ್ ಜೊತೆ ನಂಟು ಹೊಂದಿರುವ ಶಂಕೆ ಹಿನ್ನೆಲೆ, ಕೇಂದ್ರ ಎನ್ಐಎ ತಂಡದಿಂದ ಭಯೋತ್ಪಾದನೆ ಆರೋಪದಡಿ ತಾಲೂಕಿನ ಎರಡು ಮನೆಗಳ ಮೇಲೆ ಇಂದು ಏಕಕಾಲಕ್ಕೆ ದಾಳಿ ನಡೆಸಲಾಯಿತು.
ಐಸಿಸ್ ಜೊತೆ ನಂಟು ಶಂಕೆ: ಎನ್ಐಎ ತಂಡದಿಂದ ಭಟ್ಕಳದ ಜುಫ್ರಿ ಜವ್ಹಾರ್ ದಾಮುದಿ ಬಂಧನ - ಭಟ್ಕಳ ಎರಡು ಮನೆ ಮೇಲೆ ಎನ್ಐಎ ದಾಳಿ
ಭಯೋತ್ಪಾದನೆ ಆರೋಪದಡಿಯಲ್ಲಿ ಭಟ್ಕಳ ತಾಲೂಕಿನ ಸಾಗರ ರಸ್ತೆಯಲ್ಲಿನ ಎರಡು ಮನೆಗಳ ಮೇಲೆ ಕೇಂದ್ರ ಎನ್ಐಎ ತಂಡದಿಂದ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ತಾಲೂಕಿನ ಸಾಗರ ರಸ್ತೆ ಹಾಗೂ ಉಮರ್ ಸ್ಟ್ರೀಟ್ನಲ್ಲಿರುವ ಎರಡು ಮನೆಗಳ ಮೇಲೆ ಎನ್ಐಎ ದಂಡ ದಾಳಿ ನಡೆಸಿತು. ಈ ಹಿಂದೆ ಬಂಧನಕ್ಕೊಳಕ್ಕಾಗಿದ್ದ ಭಯೋತ್ಪಾದಕ ಓರ್ವನ ಸಂಬಂಧಿಯನ್ನು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಜಿಲ್ಲೆಯ ಉನ್ನತಾಧಿಕಾರಿಗಳ ಜತೆ ಗುಪ್ತವಾಗಿ ಎನ್ಐಎ ತಂಡ ದಾಳಿ ನಡೆಸಿದೆ. ಪರಿಶೀಲನೆ ಮುಂದುವರೆಸಿರುವ ತಂಡ ಜುಫ್ರಿ ಜವ್ಹಾರ್ ದಾಮುದಿ ಎಂಬುವನನ್ನು ಬಂಧಿಸಿದೆ.
ಈ ವಿಚಾರಕ್ಕಾಗಿ ನಿನ್ನೆಯಿಂದಲೇ ಭಟ್ಕಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಕ್ಕಾಂ ಹೂಡಿದ್ದರು. ಹೆಚ್ಚಿನ ಮಾಹಿತಿ ವಿಚಾರಣೆ ಬಳಿಕೆ ದಾಳಿ ಕುರಿತು ಅಧಿಕೃತ ಮಾಹಿತಿ ತಿಳಿದು ಬರಬೇಕಿದೆ. ದಾಳಿ ವೇಳೆ ತಾಲೂಕಿನ ಹಲವೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.