ಕರ್ನಾಟಕ

karnataka

ETV Bharat / state

ಶಿರಸಿಯಲ್ಲಿಯೂ ಎನ್​ಐಎ ದಾಳಿ: ಎಸ್​​ಡಿಪಿಐ ಮುಖಂಡನ ಬಂಧನ - ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳ ದಾಳಿ

ರಾಜ್ಯದ ವಿವಿಧೆಡೆ ಇಂದು ಬೆಳ್ಳಂಬೆಳಗ್ಗೆ ಎನ್​ಐಎ ದಾಳಿ ನಡೆದಿದೆ. ಶಿರಸಿಯಲ್ಲಿ ಎಸ್​​ಡಿಪಿಐ ಮುಖಂಡನನ್ನು ಬಂಧಿಸಲಾಗಿದೆ.

nia-officials-raid-in-sirsi
ಶಿರಸಿಯಲ್ಲಿ ಎನ್​ಐಎ ದಾಳಿ : ಎಸ್​​ಡಿಪಿಐ ಮುಖಂಡನ ಬಂಧನ

By

Published : Sep 22, 2022, 9:23 AM IST

Updated : Sep 22, 2022, 5:01 PM IST

ಶಿರಸಿ:ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟಿಪ್ಪು ನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿದ್ದು, ಎಸ್​​ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬಾತನನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳೀಯ ಪೊಲೀಸರು ಅಧಿಕಾರಿಗಳು, ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಯಿತು.

ಇದನ್ನೂ ಓದಿ:ದೇಶಾದ್ಯಂತ ಮಧ್ಯರಾತ್ರಿಯಿಂದಲೇ PFI ಕಚೇರಿಗಳ ಮೇಲೆ ಎನ್​ಐಎ, ಇಡಿ ದಿಢೀರ್‌ ದಾಳಿ

ಮುಂಜಾನೆ 3.30ರಿಂದಲೇ ಅಬ್ದುಲ್ ಮನೆಯ ಬಳಿ ಪೊಲೀಸರ ದಂಡೇ ನೆರೆದಿತ್ತು. ಸುಮಾರು 6 ಗಂಟೆಯ ವೇಳೆಗೆ ಈತನ ಮನೆಗೆ ಅಧಿಕಾರಿಗಳು ತೆರಳಿದ್ದು ಒಂದು ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕಗಳು ಹಾಗೂ ಒಂದು ಸಿಡಿಯನ್ನು ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.‌

ಅಬ್ದುಲ್ ಜೊತೆ ಅಲ್ಲೇ ಸಮೀಪದಲ್ಲಿದ್ದ ಆತನ ತಮ್ಮನ ಮನೆಯ ಮೇಲೂ ಶೋಧ ನಡೆದಿದೆ. ಆದರೆ ಆತ ಮನೆಯಲ್ಲಿ ಇಲ್ಲದ ಕಾರಣ ಅಬ್ದುಲ್ ಬಂಧನ ಮಾತ್ರ ಆಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಪಿಎಫ್ಐ, ಎಸ್​ಡಿಪಿಐ ಕಚೇರಿಗಳ ಮೇಲೆ ಎನ್​ಐಎ ದಾಳಿ: ಹಲವು ಪ್ರತಿಭನಾಕಾರರು ವಶಕ್ಕೆ

Last Updated : Sep 22, 2022, 5:01 PM IST

ABOUT THE AUTHOR

...view details