ಭಟ್ಕಳ:ಪ್ರಸಿದ್ಧ ಪ್ರವಾಸಿ ತಾಣ ಮರ್ಡೇಶ್ವರಕ್ಕೆ ಗೋವಾದಿಂದಪತಿಯೊಂದಿಗೆ ಬಂದ ನವವಿವಾಹಿತೆ ಕಾಣೆಯಾಗಿದ್ದಾರೆ.
ನವವಿವಾಹಿತೆ ತನ್ನ ಪತಿಯೊಂದಿಗೆ ಮುರ್ಡೇಶ್ವರಕ್ಕೆ ಬಂದಿದ್ದರು. ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿ ರೂಮ್ ನೋಡಲು ಗೆಸ್ಟ್ ಹೌಸ್ಗೆ ಹೋಗಿ ವಾಪಸ್ ಬಂದೆ. ಅಷ್ಟೊತ್ತಿಗೆ ಪಾರ್ಕಿಂಗ್ ಸ್ಥಳದ ಕಟ್ಟೆ ಮೇಲೆ ಕುಳಿತಿದ್ದ ಪತ್ನಿ ಕಾಣೆಯಾಗಿದ್ದಾಳೆ ಎಂದು ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.