ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ನವ ವಿವಾಹಿತ ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಹಡಿನಬಾಳದಲ್ಲಿ ನಡೆದಿದೆ.
ಸೇತುವೆಯಿಂದ ಉರುಳಿ ಬಿದ್ದ ಕಾರು: ಅಪಘಾತದಲ್ಲಿ ನವವಿವಾಹಿತ ಸಾವು! - ಕಾರವಾರ ಅಪರಾಧ ಸುದ್ದಿ
ಅಪಘಾತದಲ್ಲಿ ನವವಿವಾಹಿತ ಸಾವು!
14:59 November 19
ಶಿವಮೊಗ್ಗ ಮೂಲದ ರಾಹುಲ್ (32) ಮೃತಪಟ್ಟವ. ಶಿವಮೊಗ್ಗದಿಂದ ಹೊನ್ನಾವರ ಮಾರ್ಗವಾಗಿ ಗೋವಾಕ್ಕೆ ಚಲಿಸುತ್ತಿದ್ದ ಕಾರಿನಲ್ಲಿ ಒಟ್ಟು ಎರಡು ಯುವ ಜೋಡಿಗಳು ತೆರಳುತ್ತಿದ್ದವು ಎನ್ನಲಾಗಿದೆ.
ಹಡಿನಬಾಳ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆ ಕೆಳಗೆ ಬಿದ್ದಿದೆ. ಸಾವಿಗೀಡಾದವನ ಪತ್ನಿ ಹಾಗೂ ಇನ್ನೊಂದು ಜೋಡಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
Last Updated : Nov 19, 2020, 3:22 PM IST