ಕಾರವಾರ: ಕೆಲವು ದಿನಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತನೋರ್ವ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಮಟಾದ ರೈಲ್ವೆ ನಿಲ್ದಾಣದ ಬಳಿ ಇಂದು ನಡೆದಿದೆ.
ರೈಲಿಗೆ ತಲೆಕೊಟ್ಟು ನವವಿವಾಹಿತ ಆತ್ಮಹತ್ಯೆ - undefined
ನವವಿವಾಹಿತ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿಟ್ಟು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆ
ಭಟ್ಕಳ ತಾಲೂಕಿನ ಮುಂಡಳ್ಳಿ ನಿವಾಸಿ ವೆಂಕಟೇಶ್ವರ ಮಲ್ಯಾ ನಾಯ್ಕ (30) ಮೃತ ವ್ಯಕ್ತಿಯಾಗಿದ್ದಾನೆ. ರಾಯಚೂರಿನಲ್ಲಿ ಶಿಕ್ಷಕನಾಗಿದ್ದ ಈತ ಸೋಮವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.
ರೈಲು ಬಡಿದ ವೇಗಕ್ಕೆ ಆತನ ತಲೆ ಸಂಪೂರ್ಣವಾಗಿ ಛಿದ್ರವಾಗಿದೆ. ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ತಾನೇ ಕಾರಣ ಎಂದು ಚೀಟಿ ಬರೆದಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.