ಕರ್ನಾಟಕ

karnataka

ETV Bharat / state

ಕಾರವಾರ: ಇಂದು ಎನ್​ಸಿಸಿ ಶಿಬಿರ ಸಮಾರೋಪ - NCC Camp in Karwar '

8 ಕರ್ನಾಟಕ ನೇವಲ್ ಯುನಿಟ್ ಎನ್​ಸಿಸಿ ವಾರ್ಷಿಕ ತರಬೇತಿ ಶಿಬಿರ ಕಾರವಾರದ ಪಾಲಿಟೆಕ್ನಿಕ್​ ಕಾಲೇಜಿನಲ್ಲಿ ನಡೆದಿದ್ದು, ಇಂದಿಗೆ ಮುಕ್ತಾಯವಾಗಿದೆ.

karwar
ಕರ್ನಾಟಕ ನೇವಲ್ ಯುನಿಟ್ ಎನ್​ಸಿಸಿ ವಾರ್ಷಿಕ ತರಬೇತಿ ಶಿಬಿರ

By

Published : Jan 25, 2021, 2:25 PM IST

ಕಾರವಾರ:ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ 8 ಕರ್ನಾಟಕ ನೇವಲ್ ಯುನಿಟ್ ಎನ್​ಸಿಸಿ ವಾರ್ಷಿಕ ತರಬೇತಿ ಶಿಬಿರ ಇಂದು ಸಮಾರೋಪಗೊಂಡಿದೆ.

ಕೋವಿಡ್ ಮುಂಜಾಗೃತೆಯೊಂದಿಗೆ ಒಟ್ಟು ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ, ಸೀಮನ್‌ಶಿಪ್, ನೇವಲ್ ಓರಿಯಂಟೇಶನ್, ನ್ಯಾವಿಗೇಷನ್, ಪರೇಡ್, ಯೋಗ ಸೇರಿದಂತೆ ಇನ್ನಿತರ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಯಿತು.

ಶಿಬಿರದಲ್ಲಿ ಕಾರವಾರ, ಗೋಕರ್ಣ, ಹೊನ್ನಾವರ, ಕುಮಟಾ ಭಾಗದ 67 ಪುರುಷ ಹಾಗೂ 27 ಮಹಿಳಾ ಕೆಡೆಟ್ ಸೇರಿ ಒಟ್ಟು 94 ಕೆಡೆಟ್​ಗಳು ಭಾಗವಹಿಸಿದ್ದರು. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ 10 ದಿನಗಳ ಕಾಲ ನಡೆಯುವ ವಾರ್ಷಿಕ ತರಬೇತಿ ಶಿಬಿರವನ್ನು ಈ ಬಾರಿ ಕೇವಲ ಐದು ದಿನಗಳವರೆಗೆ ಮಾತ್ರ ನಡೆಸಲಾಯಿತು.

ಮಕ್ಕಳಲ್ಲಿ ನಾಯಕತ್ವದ ಗುಣ, ಕ್ರೀಡೆ, ದೇಶಾಭಿಮಾನ, ಸ್ವಯಂ ಸೇವೆಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ರಿತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಯಾವುದೇ ಎನ್ ಸಿಸಿ ಕೆಡೆಟ್ ಗಳು ಸರ್ಟಿಫಿಕೇಟ್ ಪಡೆಯಬೇಕಾದರೇ ಒಂದಾದರೂ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿದೆ. ಆದರೆ ಈ ಬಾರಿ ಕೊರೊನಾ ಕಾರಣದಿಂದ ಇದೇ ಮೊದಲ ಬಾರಿಗೆ ಶಿಬಿರ ಆಯೋಜಿಸಿದ್ದು, ಪ್ರಸ್ತುತ ಶಿಬಿರದಲ್ಲಿ ಬಿ ಮತ್ತು ಸಿ ಸರ್ಟಿಫಿಕೇಟ್ ಕೆಡೆಟ್​ಗಳು ಭಾಗವಹಿಸಿದ್ದಾರೆ. ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿ ಪಾಲಕರಿಂದ ಒಪ್ಪಿಗೆ ಪಡೆದ ಬಳಿಕವೇ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟಕದ ಕಮಾಂಡಿಂಗ್ ಅಧಿಕಾರಿ ಕಮಾಂಡರ್ ಸತ್ಯನಾಥ ಬೋಸ್ಲೆ, ಅಧಿಕಾರಿಗಳಾದ ಲೆಫ್ಟಿನೆಂಟ್ ವಿ.ಆರ್. ಶಾನಭಾಗ್​, ಸಂತೋಷ್ ಗುಡಿಗರ್, ಗೀತಾ ತಲ್ವಾರ್ ಮತ್ತು ಎನ್‌ಸಿಸಿ ಘಟಕದ ನೌಕಾಪಡೆಯ ಸಿಬ್ಬಂದಿ ಸೊಹನ್‌ವೀರ್, ಎಸ್‌ಕೆ ಯಾದವ್, ಸಂಜೀವ್, ವೈ.ಎಲ್‌.ಬಿರಾದಾರ್, ಎಂ.ಕೆ.ಮೌರ್ಯ ಕಡೆಗಳಿಗೆ ತರಬೇತಿ ನೀಡಿದರು.

ABOUT THE AUTHOR

...view details