ಭಟ್ಕಳ :ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ.
ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ - ನವರಾತ್ರಿ ಪ್ರಯುಕ್ತ ಅನ್ನಸಂತರ್ಪಣೆ
ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ.
ಕೇವಲ ಊರಿನ ಭಕ್ತರು ಮಾತ್ರವಲ್ಲದೇ ಜಿಲ್ಲೆ, ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ಶ್ರೀ ದೇವರಲ್ಲಿ ಹರಿಕೆ ಕಾಣಿಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಇಲ್ಲಿ 15 ದಿನಗಳ ಕಾಲ ನವರಾತ್ರಿ ಆಚರಣೆಯೂ ನಡೆಯುವುದು ವಿಶೇಷವಾಗಿದೆ. ನವರಾತ್ರಿಯ ಒಂಬತ್ತು ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೆಯ ದಿನವಾದ ವಿಜಯ ದಶಮಿಯಂದು ದೇವಸ್ಥಾನದಲ್ಲಿ ಪ್ರಾರಂಭಿಕ ಪೂಜಾ ವಿಧಿವಿಧಾನಗಳ ನಂತರ ನವಚಂಡಿಕಾ ಯಾಗ ನಡೆಯಿತು. ನಂತರ ನಡೆದ ಅನ್ನದಾಸೋಹದಲ್ಲಿ ಸುಮಾರು 3 ರಿಂದ 4 ಸಾವಿರ ಭಕ್ತರು ಪಾಲ್ಗೊಂಡರು.
ನವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ನವ ಚಂಡಿಕಾ ಹವನ, ಅನ್ನಸಂತರ್ಪಣೆ ಉದಯಾಸ್ತಮಾನ ಸೇವೆ ಸೇರಿ ಹಲವು ಸೇವೆಗಳು ಭಕ್ತರಿಂದ ನಡೆಯುತ್ತಾ ಬಂದಿದೆ. ದಿನನಿತ್ಯ ಭಜನೆ, ಲಲಿತಸಹಸ್ರನಾಮ, ಪಾರಾಯಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ದಿನಾಂಕ 13ರಂದು ಭಟ್ಕಳ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ದೇವಸ್ಥಾನ ಚಾರಿಟಬಲ್ ಟ್ರಸ್ಟ್ನಿಂದ ನಡೆಯಲಿದೆ.