ಶಿರಸಿ: ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಸಿಲುಕಿ ಮನೆ ಕಳೆದುಕೊಂಡಿದ್ದ ಶಿರಸಿಯ ಬಡ ಕುಟುಂಬಕ್ಕೆ ಚಿತ್ರದುರ್ಗದ ಮುರುಘಾ ಬೃಹನ್ಮಠದ ಡಾ. ಶಿವಮೂರ್ತಿ ಮುರುಘರಾಜೇಂದ್ರ ಶರಣರು ಸಹಾಯಹಸ್ತ ಚಾಚಿದ್ದಾರೆ.
ಮಳೆಯಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ ಮುರುಘಾ ಶ್ರೀ - muruga sri help
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಮಳೆಗೆ ಮನೆ ಕಳೆದುಕೊಂಡಿದ್ದ ಸಂತ್ರಸ್ತರ ಮನೆಗೆ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘರಾಜೇಂದ್ರ ಶರಣರು ಭೆಟಿ ನೀಡಿ ಧನಸಹಾಯದ ಚೆಕ್ ನೀಡಿದ್ದಾರೆ.
ಮುರುಘಾರಾಜೇಂದ್ರ ಶರಣರು
ಶಿರಸಿಯ ಗಣೇಶನಗರದ ಚಂದ್ರಕಲಾ ಭೋವಿ ವಡ್ಡರ್ ಹಾಗೂ ಸುರೇಶ ಭೋವಿ ವಡ್ಡರ್ ಅವರಿಗೆ ಸೇರಿದ ಮನೆ ಮಳೆಯಿಂದಾಗಿ ಹಾನಿಯಾಗಿತ್ತು. ಶಿರಸಿಗೆ ಆಗಮಿಸಿದ್ದ ಶ್ರೀಗಳು ಸಂತ್ರಸ್ತರ ಮನೆಗೆ ತೆರಳಿ ಧನಸಹಾಯದ ಚೆಕ್ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಶ್ರೀಗಳು, ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ಸರ್ಕಾರ ತಾರತಮ್ಯ ಮಾಡಬಾರದು. ಮಾನವೀಯ ನೆಲೆಯಲ್ಲಿ ಆಡಳಿತದ ತ್ವರಿತ ಸ್ಪಂದನೆ ದೊರಕಬೇಕು ಎಂದರು. ಈ ವೇಳೆ ಶಿರಸಿಯ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಇತರರು ಇದ್ದರು.