ಶಿರಸಿ : ಮೀಸಲಾತಿ ಇಂದು ಹೊಸ ಸ್ವರೂಪ ಪಡೆದಿದೆ. ಮೀಸಲಾತಿಯಲ್ಲಿನ ಒಳ ಮೀಸಲಾತಿ ಇಂದು ಅತಿ ಮೀಸಲಾತಿಯಾಗಿದೆ ಎಂದು ಚಿತ್ರದುರ್ಗ ಮುರುಘಾಮಠದ ಶಿವಯೋಗಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಶಿರಸಿಯ ಶ್ರದ್ಧಾನಂದ ಗಲ್ಲಿಯಲ್ಲಿ ನಡೆದ ಮಾರುತಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಕೇಳುತ್ತಿರುವ ಒಳ ಮೀಸಲಾತಿ ಅತಿ ಮೀಸಲಾತಿಯಾಗಿದೆ. ಅತಿ ಮೀಸಲಾತಿಯ ಕಾಲದಲ್ಲಿ ನಾವೆಲ್ಲರೂ ಇದ್ದೇವೆ ಎಂದರು.