ಶಿರಸಿ: ಕಲ್ಲಿನಿಂದ ಜಜ್ಜಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಸಿದ್ದಾಪುರ ತಾಲೂಕಿನ ದೊಡ್ಮನೆ ಸಮೀಪದ ನೆಟ್ಗೋಡ್ನಲ್ಲಿ ನಡೆದಿದೆ. ಗೌರಿ ಈಶ್ವರ ನಾಯ್ಕ (50) ಕೊಲೆಯಾದ ಮಹಿಳೆಯಾಗಿದ್ದು, ಕಳೆದ ಮೂರು ವರ್ಷದ ಹಿಂದೆ ಪತಿ ಮೃತರಾಗಿದ್ದರು. ಮಹಿಳೆ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ವಿದ್ಯುತ್ ಬಿಲ್ ಕೊಡಲು ಹೋದ ಕಲೆಕ್ಟರ್ ನೋಡಿ ವಿಷಯ ತಿಳಿಸಿದ್ದಾರೆ.
ಕಲ್ಲಿನಿಂದ ಜಜ್ಜಿ ಮಹಿಳೆಯ ಕೊಲೆ: ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ - ಸಿದ್ದಾಪುರ ತಾಲೂಕಿನ ದೊಡ್ಮನೆ ಸಮೀಪ ಕೊಲೆ
ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕಲ್ಲಿನಿಂದ ಜಜ್ಜಿ ಮಹಿಳೆಯ ಕೊಲೆ
ಶವದ ಮೇಲೆ ಕಲ್ಲಿನಿಂದ ಜಜ್ಜಿರುವ ಗುರುತು ಪತ್ತೆಯಾಗಿದ್ದು, ಬಟ್ಟೆ ಕೂಡ ಅಸ್ತವ್ಯಸ್ತವಾಗಿದೆ. ಇದರಿಂದ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಗಳಿಗೆ ಮದುವೆಯಾಗಿದ್ದು, ಮಗ ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.