ಕರ್ನಾಟಕ

karnataka

ETV Bharat / state

’ಹೊಟ್ಟೆಗೆ ಕೂಳಿಲ್ಲ’... ಮುಂಡಗೋಡು ಗ್ರಾಮಸ್ಥರಿಂದ ಅನಂತಕುಮಾರ್​ ಹೆಗಡೆ ವಿರುದ್ಧ ಆಕ್ರೋಶ - MP Anathkumar Hegade

ಪ್ರವಾಹಕ್ಕೆ ತುತ್ತಾದ ಮುಂಡಗೋಡು ಗ್ರಾಮಕ್ಕೆ ಭೇಟಿ ನೀಡಲು ನಿರಾಕರಿಸಿದ ಸಂಸದ ಅನಂತಕುಮಾರ್​ ಹೆಗಡೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಅನಂತಕುಮಾರ್​ ಹೆಗಡೆ

By

Published : Aug 13, 2019, 4:18 PM IST

Updated : Aug 13, 2019, 5:20 PM IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಚಿಗಳ್ಳಿ ಚೆಕ್ ಡ್ಯಾಮ್ ಒಡೆದು ಭಾರೀ ಅನಾಹುತವೇ ಸಂಭವಿಸಿದೆ. ಪ್ರವಾಹಕ್ಕೆ ತುತ್ತಾದ ಮುಂಡಗೋಡು ಗ್ರಾಮಕ್ಕೆ ಭೇಟಿ ನೀಡಲು ನಿರಾಕರಿಸಿದ ಸಂಸದ ಅನಂತಕುಮಾರ್​ ಹೆಗಡೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಟ್ಟೆಗೆ ಕೂಳಿಲ್ಲಲೇ ಎಂದು ಕಿಡಿಕಾರಿದ್ದಾರೆ.

ಹೊಟ್ಟೆಗೆ ಕೂಳಿಲ್ಲ: ಅತಂತಕುಮಾರ್​ ಹೆಗಡೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಚಿಗಳ್ಳಿ ಚೆಕ್ ಡ್ಯಾಂ ಒಡೆದ ಹಿನ್ನೆಲೆ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಗ್ರಾಮಸ್ಥರು ಆಗಮಿಸಿದ್ದರು. ಈ ವೇಳೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಉ.ಕ ಸಂಸದ ಅನಂತಕುಮಾರ್ ಹೆಗಡೆಗೆ ಪ್ರವಾಹದಿಂದ ಹಾನಿಯಾದ ತಮ್ಮೂರಿಗೆ ಬಂದು ವೀಕ್ಷಿಸಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದರು. ಆದರೆ, ಎಲ್ಲವನ್ನೂ ಅಧಿಕಾರಿಗಳು ನೋಡಿಕೊಳ್ಳುತ್ತಾರೆ, ನಾನು ಬರುವುದು ಮುಖ್ಯವಲ್ಲ ಎಂದು ಅನಂತಕುಮಾರ್​ ಜಾರಿಕೊಂಡರು.

ಸಂಸದರ ನಿರ್ಲಕ್ಷ್ಯಕ್ಕೆ ಕೋಪಗೊಂಡ ಗ್ರಾಮಸ್ಥರು ಹೊಟ್ಟೆಗೆ ಕೂಳಿಲ್ಲಲೇ ಎಂದು ಕಿಡಿಕಾರಿದರು. ಇಷ್ಟಾದರೂ ತುಟಿಪಿಟಕ್​ ಎನ್ನದ ಅನಂತಕುಮಾರ್ ಮುಖ ಮಾತ್ರ ಕೆಂಡಾಮಂಡಲವಾಗಿತ್ತು.

Last Updated : Aug 13, 2019, 5:20 PM IST

ABOUT THE AUTHOR

...view details