ಕರ್ನಾಟಕ

karnataka

ETV Bharat / state

ಎಟಿಎಮ್​ಗಳಿಗೆ ಪೌರ ಕಾರ್ಮಿಕರಿಂದ ರಾಸಾಯನಿಕ ಸಿಂಪಡಣೆ..! - corona latest news

ಭಟ್ಕಳ ತಾಲೂಕಿನ ಎಲ್ಲಾ ಪ್ರಮುಖ ರಾಷ್ಟ್ರೀಯ ಬ್ಯಾಂಕ್, ಖಾಸಗಿ ಬ್ಯಾಂಕ್ ಹಾಗೂ ಕೋ ಆಪರೇಟಿವ್ ಬ್ಯಾಂಕ್​ ಎಟಿಎಮ್​ಗಳ ಹೊರಾಂಗಣ, ಎಟಿಎಮ್ ಕೊಠಡಿಗಳಿಗೆ ಔಷಧಿ ಸಿಂಪಡಣೆ ಮಾಡಲಾಯಿತು.

bhatkal
ಭಟ್ಕಳ

By

Published : Apr 3, 2020, 1:00 PM IST

ಭಟ್ಕಳ: ತಾಲೂಕಿನ ಜನ ಮನೆಯಲ್ಲಿಯೇ ಇದ್ದು ಸರ್ಕಾರದ ಆದೇಶ ಪಾಲನೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಪೌರ ಕಾರ್ಮಿಕರು ಕೋರೋನಾ ಕಡಿವಾಣಕ್ಕೆ ತಾಲೂಕಿನ ಎಲ್ಲಾ ಬ್ಯಾಂಕ್ ಎಟಿಮ್ ಗಳ ಕೊಠಡಿಗಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ.

ತಾಲೂಕಿನ ಎಲ್ಲಾ ಪ್ರಮುಖ ರಾಷ್ಟ್ರೀಯ ಬ್ಯಾಂಕ್, ಖಾಸಗಿ ಬ್ಯಾಂಕ್ ಹಾಗೂ ಕೋ ಆಪರೇಟಿವ್ ಬ್ಯಾಂಕ್​ ಎಟಿಎಮ್​ಗಳ ಹೊರಾಂಗಣ, ಎಟಿಎಮ್ ಕೊಠಡಿಗಳಿಗೆ ಔಷಧ ಸಿಂಪಡಣೆ ಮಾಡುವುದರ ಜೊತೆಗೆ ಬ್ಯಾಂಕ್​ಗಳ ಬಾಗಿಲಿಗೂ ಸಹ ಔಷಧಿ ಸಿಂಪಡಣೆ ಮಾಡಲಾಯಿತು.

ಈ ಸಿಂಪಡಣೆಯಲ್ಲಿ ಸೋಡಿಯಂ ಹೈಫೋ ಕ್ಲೋರೈಡ್ ರಾಸಾಯನಿಕ ಮಿಶ್ರಿತ ಅಂಶವಿದ್ದು, ಇದರಿಂದ ವೈರಸ್ ಗಳಿಗೆ ಕಡಿವಾಣ ಹಾಕಬಹುದು.
ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರ ಪರವಾನಿಗೆ ಪಡೆದು ಪೌರ ಕಾರ್ಮಿಕರಾದ ನಾಗರಾಜ್ ಹಾಗೂ ಶ್ರೀನಿವಾಸ್​ ಎಂಬುವವರು ಸಿಂಪಡಿಸಿದ್ದಾರೆ.

ABOUT THE AUTHOR

...view details