ಭಟ್ಕಳ:ತಾಲೂಕಿನ ಬಂದರು ನಿವಾಸಿಯಾಗಿರುವ ನಿತೀನ್ ಚಂದ್ರ ನಾಯ್ಕ ಎನ್ನುವ ಯುವಕ ಮಿಸ್ಟರ್ ದಸರಾ 2019ರ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಭಟ್ಕಳ ತಾಲೂಕಿಗೆ ಕೀರ್ತಿ ತಂದಿದ್ದಾನೆ.
ಮಿಸ್ಟರ್ ದಸರಾ 2019: ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಟ್ಕಳದ ಯುವಕನಿಗೆ ದ್ವಿತೀಯ ಸ್ಥಾನ - ದಸರಾ ಕ್ರೀಡಾ ಸಮಿತಿ
ಭಟ್ಕಳ ತಾಲೂಕಿನ ಬಂದರು ನಿವಾಸಿಯಾಗಿರುವ ನಿತೀನ್ ಚಂದ್ರ ನಾಯ್ಕ ಎನ್ನುವ ಯುವಕ ಮಿಸ್ಟರ್ ದಸರಾ 2019ರ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಭಟ್ಕಳ ತಾಲೂಕಿಗೆ ಕೀರ್ತಿ ತಂದಿದ್ದಾನೆ.
ಈ ವರ್ಷದ ದಸರಾ ಕ್ರೀಡಾ ಸಮಿತಿ, ಯುವಜನ ಸೇವಾ ಕ್ರೀಡಾ ಇಲಾಖೆ ಮೈಸೂರು ಹಾಗೂ ಕರ್ನಾಟಕ ಸರ್ಕಾರ ಇದರೊಂದಿಗೆ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡಿಂಗ್ ಇವರ ಸಹಯೋಗದೊಂದಿಗೆ ಚಾಮುಂಡಿ ವಿಹಾರ ಸ್ಟೇಡಿಯಂ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ನಿತೀನ್ ಚಂದ್ರ ನಾಯ್ಕ ದ್ವಿತೀಯ ಸ್ಥಾನ ಪಡೆದು ರಜತ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈತ ಭಟ್ಕಳದ ಹೆಸರಾಂತ ಫ್ರೆಂಡ್ಸ್ ಜಿಮ್ನಲ್ಲಿ ತರಬೇತಿ ಪಡೆಯುತ್ತಿದ್ದಾನೆ.
ತರಬೇತುದಾರರಾದ ವೆಂಕಟೇಶ್ ನಾಯ್ಕ್ ಹಾಗೂ ಜಿಲ್ಲಾ ದೇಹದಾರ್ಢ್ಯ ಸಂಘದ ಅಧ್ಯಕ್ಷರಾದ ಎಸ್.ಡಿ.ನಾಯ್ಕ ಹಾಗೂ ರಾಜ್ಯ ದೇಹದಾರ್ಢ್ಯ ಸಂಘದ ಉಪಾಧ್ಯಕ್ಷರು ಹಾಗೂ ರಾಜ್ಯ ದೇಹದಾರ್ಢ್ಯ ತೀರ್ಪುಗಾರರ ಸಂಘದ ಅಧ್ಯಕ್ಷರಾದ ಪ್ರೊ. ಜಿ.ಡಿ.ಭಟ್ ಹಾಗೂ ಭಟ್ಕಳದ ಸಮಸ್ತ ನಾಗರಿಕರು ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.