ಕಾರವಾರ: ಮದ್ಯಸೇವನೆಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ತಂದೆಯೊಂದಿಗೆ ಸೇರಿ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಕುಮಟಾ ತಾಲೂಕಿನ ಕೂಜಳ್ಳಿಯಲ್ಲಿ ನಡೆದಿದೆ. ಕೂಜಳ್ಳಿಯ ಗೀತಾ ಭಟ್ (64) ಕೊಲೆಯಾದ ಮಹಿಳೆ. ಇವರ ಪತಿ ವಿಶ್ವೇಶ್ವರ ಭಟ್ ಹಾಗೂ ಮಗ ಮಧುಕರ್ ಭಟ್ ಇಬ್ಬರೂ ಮದ್ಯಸೇವನೆಗೆ ದಾಸರಾಗಿದ್ದರು.
ನಿತ್ಯವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು ಎನ್ನಲಾಗಿದೆ. ಇಂದು ಕೂಡ ವಿಪರೀತವಾಗಿ ಕುಡಿದಿದ್ದ ಇಬ್ಬರು ಮತ್ತೆ ಕುಡಿಯಲು ಹಣ ಕೇಳಿದ್ದು, ಗೀತಾ ಭಟ್ ಅವರು ಕೊಡದೇ ಇದ್ದಾಗ ತಂದೆ ಮಗ ಇಬ್ಬರು ಸೇರಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.