ಕಾರವಾರ:ಕದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನಿರಂತರವಾಗಿ ಹೊರಬಿಟ್ಟ ಕಾರಣ ಕಾಳಿ ನದಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ತುಂಬಿಕೊಂಡಿದ್ದ ನೀರು ಕೊಂಚ ಕಡಿಮೆಯಾಗಿದೆ.
ಪ್ರವಾಹದಿಂದ ನೆಲಸಮಗೊಂಡ ಮನೆಗಳು: ಪ್ರತ್ಯಕ್ಷ ವರದಿ ಆದರೆ, ಕದ್ರಾ ಜಲಾಶಯದ ಸಮೀಪದಲ್ಲಿಯೇ ಇರುವ ಗಾಂಧಿ ನಗರದಲ್ಲಿ ಎರಡು ದಿನಗಳ ಕಾಲ ನೀರು ತುಂಬಿಕೊಂಡ ಕಾರಣ ಈ ಭಾಗದ ಸುಮಾರು 20 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು ಜನ ಬೀದಿಗೆ ಬಂದಿದ್ದಾರೆ.
ತುತ್ತು ಅನ್ನಕ್ಕಾಗಿ ಹರಸಾಹಸ:
ಜಲಾಶಯದಿಂದ ನಿರಂತರವಾಗಿ ನೀರನ್ನ ಹರಿಬಿಟ್ಟ ಕಾರಣ ಅದೆಷ್ಟೋ ಮನೆಗಳು ನೆಲಸಮವಾಗಿವೆ. ಇದೀಗ ನೀರು ಕೊಂಚ ಇಳಿದಿದ್ದು, ವ್ಯಕ್ತಿಯೋರ್ವ ಹೊತ್ತಿನ ಕೂಳಿಗಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿ ಚೀಲವನ್ನು ಸಂರಕ್ಷಿಸಲು ಎದೆಮಟ್ಟದ ನೀರಿನಲ್ಲಿ ಪರದಾಡುತ್ತಿದ್ದ ದೃಶ್ಯ ಮನಕಲಕುವಂತಿದೆ.
ಕದ್ರಾ ನಿವಾಸಿ ತಾದೇವ್ ಫರ್ನಾಂಡಿಸ್ ಕದ್ರಾ ಜಲಾಶಯದಿಂದ ನಿರಂತರವಾಗಿ ನೀರು ಹೊರ ಬಿಟ್ಟ ಕಾರಣ ಕದ್ರಾ, ಮಲ್ಲಾಪುರ ಸೇರಿ ಕಾಳಿ ನದಿ ತೀರದ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದವು. ಎರಡು ದಿನಗಳು ತುಂಬಿಕೊಂಡಿದ್ದ ನೀರು ಇದೀಗ ಕೆಲವೆಡೆ ಕೊಂಚ ಇಳಿಕೆಯಾಗಿದೆ. ಹೀಗಾಗಿ ಮಲ್ಲಾಪುರ ಪೊಲೀಸ್ ಠಾಣೆ ಬಳಿ ವಾಸಿಸುತ್ತಿದ್ದ ತಾದೇವ್ ಫರ್ನಾಂಡಿಸ್ ಎಂಬುವವರು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿ ಚೀಲವನ್ನು ಎದೆಮಟ್ಟದ ನೀರಿನಲ್ಲಿ ಸಾಗಿಸಿದ್ದಾರೆ.
ಕದ್ರಾ ಜಲಾಶಯದಿಂದ ನಿರಂತರವಾಗಿ ಮೂರು ದಿನಗಳಿಂದ ನೀರು ಬಿಡುತ್ತಿರುವ ಕಾರಣ ಈ ಭಾಗದ 50 ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಕದ್ರಾ ಜಲಾಶಯದಿಂದ ನಿರಂತರ ನೀರು ಹೊರಕ್ಕೆ: ಜನರಲ್ಲಿ ಹೆಚ್ಚಿದ ಆತಂಕ