ಕರ್ನಾಟಕ

karnataka

ETV Bharat / state

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಂಗಗಳ ಸಾವು: ಹೆಚ್ಚಿದ ಆತಂಕ - ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಂಗನ ಸಾವು

ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಂಗನ ಕಾಯಿಲೆ ವ್ಯಾಪಿಸುತ್ತಿದೆ. ಈ ವೇಳೆ ಅರಬೈಲ ಗ್ರಾಮದಲ್ಲಿ ಮಂಗವೊಂದು ಸತ್ತು ಬಿದ್ದಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ.

ಮಂಗನ ಸಾವು
ಮಂಗನ ಸಾವು

By

Published : Apr 25, 2020, 3:44 PM IST

ಶಿರಸಿ: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಹೆಚ್ಚುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ ಗ್ರಾಮದಲ್ಲಿ ಮಂಗವೊಂದು ಸತ್ತು ಬಿದ್ದಿದ್ದು, ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚು ಮಾಡಿದೆ.

ಯಲ್ಲಾಪುರ ತಾಲೂಕಿನ ಅರಬೈಲ ಗ್ರಾಮದ ಡಬ್ಗುಳಿಯ ನಾಗೇಶ ಭಟ್ ಎಂಬುವರ ಮನೆಯ ಬಳಿ ಮಂಗವೊಂದು ಸತ್ತು ಬಿದ್ದಿದೆ. ಯಲ್ಲಾಪುರ ತಾಲೂಕಿನಾದ್ಯಂತ ಇದು ಐದನೇ ಪ್ರಕರಣವಾಗಿದ್ದು, ಇದು ಸಹಜ ಸಾವೋ ಅಥವಾ ಅಸಹಜ ಸಾವೋ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.

ಇನ್ನು ಮಂಗ ಸತ್ತ ಪ್ರದೇಶದ ಬಳಿಯೇ ವಿದ್ಯುತ್​ ಲೈನ್​ ಹಾದು ಹೋಗಿದ್ದು, ವಿದ್ಯುತ್​ ತಗುಲಿ ಸಾವನ್ನಪ್ಪಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕೆಲವು ತಾಲೂಕುಗಳಲ್ಲಿ ವ್ಯಾಪಿಸುತ್ತಿರುವುದು ಸ್ಥಳೀಯರ ನಿದ್ದೆಗೆಡಿಸಿದೆ.

ABOUT THE AUTHOR

...view details