ಕರ್ನಾಟಕ

karnataka

ETV Bharat / state

ಮಾನವನೊಂದಿಗೆ ಮಂಗನ ಒಡನಾಟ: ಗಮನ ಸೆಳೆಯುತ್ತಿದೆ ಈ ಕಪಿ ಚೇಷ್ಟೆ ..! - ಲಂಗೂರ್ ಮಂಗ

ಕಳೆದ ಒಂದು ತಿಂಗಳ ಹಿಂದೆ ಕಪ್ಪು ಮೂತಿಯ ಲಂಗೂರ್ ಜಾತಿಯ ಮಂಗವೊಂದು ತನ್ನ ಗುಂಪಿನಿಂದ ತಪ್ಪಿಸಿಕೊಂಡು ಆಸರಕೇರಿಯ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದು, ಇಲ್ಲಿನ ಸ್ಥಳೀಯರೊಂದಿಗೆ ಬೆರತು ಅಚ್ಚುಮೆಚ್ಚಿನ ಪ್ರಾಣಿ ಎನಿಸಿದೆ.

monkey
ಕೋತಿ

By

Published : Oct 5, 2020, 9:19 PM IST

ಭಟ್ಕಳ: ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದ ಮಂಗವೊಂದು ಮನುಷ್ಯರೊಂದಿಗೆ ಉತ್ತಮ ಒಡನಾಟ ಹೊಂದಿ, ಸುತ್ತಮುತ್ತಲ ಮನೆಗಳಿಗೆ ತೆರಳಿ ಜನರು ಕೊಟ್ಟ ಆಹಾರ ಸೇವಿಸುತ್ತಾ ದಿನ ಕಳೆಯುತ್ತಿರುವ ಘಟನೆ ಆಸರಕೇರಿಯಲ್ಲಿ ನಡೆದಿದೆ.

ಕಳೆದ ಒಂದು ತಿಂಗಳ ಹಿಂದೆ ಕಪ್ಪು ಮೂತಿಯ ಲಂಗೂರ್ ಜಾತಿಯ ಮಂಗವೊಂದು ನಾಡಿಗೆ ಬಂದಿದೆ. ಗುಂಪಿನಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಿರಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ. ಅಂದಿನಿಂದ ಇಲ್ಲಿನ ಸ್ಥಳೀಯರ ಜೊತೆ ಉತ್ತಮ ಒಡನಾಟ ಹೊಂದಿದ ವಾನರ ಪ್ರತಿದಿನ ಸುತ್ತ ಮುತ್ತಲ ಮನೆಗೆ ತೆರಳಿ ಅವರು ಕೊಟ್ಟ ಆಹಾರ ಸೇವಿಸುತ್ತಿದೆ. ಇಲ್ಲಿನ ಮಕ್ಕಳಂತೂ ಮಂಗನೊಂದಿಗೆ ಆಟವಾಡುವುದು, ಅದಕ್ಕೆ ಹಣ್ಣು - ಹಂಪಲ ತಿನ್ನಿಸುವುದು ಸೇರಿ ಅದರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.

ಎಲ್ಲರ ಗಮನ ಸೆಳೆಯುತ್ತಿದೆ ಈ ಕಪಿ ಚೇಷ್ಟೆ

ಆಸರಕೇರಿ ದೇವಸ್ಥಾನದ ಸಭಾಭವನವಿದ್ದು ಅಲ್ಲಿ ನೂರಾರು ಜನರು ದೇವಸ್ಥಾನಕ್ಕೆ ಹಾಗೂ ಮದುವೆ ಇತರ ಸಮಾರಂಭಗಳಿಗೆ ಆಗಮಿಸುತ್ತಾರೆ. ಆದರೆ ಮಂಗ ಯಾರ ಮೇಲೂ ದಾಳಿ ಮಾಡದೇ ತನ್ನ ಪಾಡಿಗೆ ಇದ್ದು ಆಹಾರ ಕೊಟ್ಟರಷ್ಟೇ ಸೇವಿಸುತ್ತಿರುವುದು ಸ್ಥಳೀಯರ ಪ್ರೀತಿಗೆ ಕಾರಣವಾಗಿದೆ.

ಇಲ್ಲಿನ ಸ್ಥಳೀಯರೊಂದಿಗೆ ಬೆರತು ಉತ್ತಮ ಒಡನಾಟ ಹೊಂದಿದ ಈ ವಾನರ ಈಗ ಸ್ಥಳೀಯರ ಅಚ್ಚುಮೆಚ್ಚಿನ ಪ್ರಾಣಿ. ಕೆಲವರಂತೂ ಇದರೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು, ಅದನ್ನು ಹೆಗಲಮೇಲೆ ಕುಳ್ಳಿರಿಸಿ ಪೋಟೊ ತೆಗೆಯುವುದು ಸೇರಿ ಅದರೊಂದಿಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ಲೈಕ್ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಸ್ಥಳೀಯರಾದ ವೆಂಕಟೇಶ ನಾಯ್ಕ ಆಸರಕೇರಿ ಮಾತನಾಡಿ, ತಿಂಗಳ ಹಿಂದೆ ಕಾಡಿನಿಂದ ಮಂಗಗಳ ಗುಂಪೊಂದು ನಾಡಿಗೆ ಬಂದಿತ್ತು. ದೇವಸ್ಥಾನದ ಮೇಲೆ ಹಾರುವಾಗ ಒಂದು ಮಂಗ ಕೆಳೆಗೆ ಬಿದ್ದಿತ್ತು. ಅದರೊಟ್ಟಿಗೆ ಬಂದ ಮಂಗಗಳು ಅಲ್ಲಿಂದ ಹೋದರೂ ಕೆಳಗೆ ಬಿದ್ದ ಮಂಗ ಇಲ್ಲಿಯೆ ಉಳಿದು ಬಿಟ್ಟಿದೆ. ಅಂದಿನಿಂದ ಇಂದಿನವರೆಗೂ ಯಾರಿಗೂ ತೊಂದರೆ ಕೊಡದೆ ಸ್ಥಳೀಯರೊಂದಿಗೆ ಬೆರೆತು ಉತ್ತಮ ಒಡನಾಟ ಹೊಂದಿದ ಈ ಮಂಗ ಈಗ ಎಲ್ಲರ ಅಚ್ಚುಮೆಚ್ಚಿನ ಪ್ರಾಣಿಯಾಗಿದೆ ಎಂದರು.

ABOUT THE AUTHOR

...view details