ಭಟ್ಕಳ:ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಮಂಗವೊಂದು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಟ್ಕಳ: ಮಂಗ ದಾಳಿಯಿಂದ ಮಹಿಳೆ ಗಂಭೀರ - ಮಂಗನಿಂದ ದಾಳಿಯಿಂದ ಮಹಿಳೆಗೆ ಗಂಭೀರ ಗಾಯ
ಉತ್ತರ ಕನ್ನಡ ಜಿಲ್ಲೆ ಭಟ್ಕಳದ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಏಕಾಏಕಿ ಮಂಗವೊಂದು ದಾಳಿ ಮಾಡಿ ಗಾಯಗೊಳಿಸಿದೆ.
![ಭಟ್ಕಳ: ಮಂಗ ದಾಳಿಯಿಂದ ಮಹಿಳೆ ಗಂಭೀರ monkey attacks women in bhatkal](https://etvbharatimages.akamaized.net/etvbharat/prod-images/768-512-10302245-975-10302245-1611064547465.jpg)
ಮಂಗನಿಂದ ದಾಳಿಯಿಂದ ಮಹಿಳೆಗೆ ಗಂಭೀರ ಗಾಯ
ಪಟ್ಟಣದ ವಿ.ಟಿ.ರೋಡ್ ವಿವಾಸಿ ಸರೋಜಿನಿ ಮಂಗನ ದಾಳಿಯಿಂದ ಗಾಯಗೊಂಡ ಮಹಿಳೆ. ಇವರು ತಮ್ಮ ಮನೆಯ ಪಕ್ಕದ ಜಂಬೂರಮಠದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಕೋತಿಯೊಂದು ದಾಳಿ ನಡೆಸಿದೆ. ಪರಿಣಾಮ ಮಹಿಳೆಯ ರಕ್ತನಾಳಕ್ಕೆ ಹಾನಿಯಾಗಿದ್ದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಭಟ್ಕಳ ಪಟ್ಟಣದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ:ಒಂದೇ ದಿನ ಸಾವಿರ ರೂ. ಜಿಗಿದ ಬೆಳ್ಳಿ: ಚಿನ್ನದ ದರದಲ್ಲಿಯೂ ಏರಿಕೆ