ಕರ್ನಾಟಕ

karnataka

ETV Bharat / state

ಮೋದಿ ಹೆಸರು ಹೇಳುವುದೇ ಅನಂತಕುಮಾರ್​ ಹೆಗಡೆಯ ಸಾಧನೆ: ದೇಶಪಾಂಡೆ - ದೇಶಪಾಂಡೆ

ಅನಂತಕುಮಾರ್ ಹೆಗಡೆಯದ್ದು ಕೇವಲ ಹಿಂದುತ್ವ ಹಾಗೂ ವಿವಾದದ ರಾಜಕಾರಣವಾಗಿದೆ. ಅವರಿಂದ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಇಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಟೀಕಿಸಿದ್ದಾರೆ.

ಸಚಿವ ಆರ್.ವಿ.ದೇಶಪಾಂಡೆ ಟೀಕಿ

By

Published : Mar 13, 2019, 9:48 PM IST

ಶಿರಸಿ:ಉತ್ತರ ಕನ್ನಡ ಜಿಲ್ಲೆಯಿಂದ ಐದು ಬಾರಿ ಸಂಸದರಾದ ಅನಂತಕುಮಾರ್​ ಹೆಗಡೆಯದ್ದು ಶೂನ್ಯ ಕೊಡುಗೆಯಾಗಿದ್ದು,ಮೋದಿ ಹೆಸರು ಹೇಳುವುದೇ ಅವರ ಸಾಧನೆಯಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಟೀಕಿಸಿದ್ದಾರೆ.

ಶಿರಸಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆಯದ್ದು ಕೇವಲ ಹಿಂದುತ್ವ ಹಾಗೂ ವಿವಾದದ ರಾಜಕಾರಣವಾಗಿದೆ. ಅವರಿಂದ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಇಲ್ಲ. ರಾಹುಲ್ ಗಾಂಧಿ ಜಾತಿ ಮೂಲ ಕೇಳುವ ಅನಂತಕುಮಾರ್​ ಹೆಗಡೆಗೆ ಸಂಸ್ಕಾರ ಇದ್ಯಾ ಎಂದು ವಾಗ್ದಾಳಿ ನಡೆಸಿದರು.

ಸಚಿವ ಆರ್.ವಿ.ದೇಶಪಾಂಡೆ ಟೀಕೆ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಇಲ್ಲ. ಒತ್ತಾಯ ಮಾಡಬೇಡಿ ಎಂದು ಕಾರ್ಯಕರ್ತರಲ್ಲಿ ವಿನಂತಿಸಿದ್ದೇನೆ. ಮಗ ಪ್ರಶಾಂತ್ ದೇಶಪಾಂಡೆ ಸಹ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್​ಗೆ ಟಿಕೆಟ್ ಕೊಟ್ರೆ ಗೆಲುವು ಅಸಾಧ್ಯ.ಕಾಂಗ್ರೆಸ್​ನಿಂದ ಮಾತ್ರ ಕ್ಷೇತ್ರದಲ್ಲಿ ಗೆಲುವು ಸಾಧ್ಯ.ಆದರೂ ಜೆಡಿಎಸ್​ಗೆ ಟಿಕೆಟ್ ನೀಡಬೇಕು ಎಂಬ ವಿಷಯ ಯಾಕೆ ಪ್ರಸ್ತಾಪವಾಗಿದೆ ಎಂದು ತಿಳಿತಿಲ್ಲ ಎಂದರು.

ABOUT THE AUTHOR

...view details