ಭಟ್ಕಳ :ಪ್ರತಿಷ್ಠಿತ ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಹಕಾರಿ ಬ್ಯಾಂಕ್ (ಕಾಸ್ಕಡ್) ನಿರ್ದೇಶಕರಾಗಿ ಇಲ್ಲಿನ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಕಾಸ್ಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅತ್ಯಂತ ಪ್ರಬಲ ಸ್ಪರ್ಧೆಯೊಡ್ಡಿದ ಕುಮಟಾ ಅಭ್ಯರ್ಥಿ ಭುವನ್ ನಾಗರಾಜ್ ಅವರಿಂದ 1 ಮತದ ಅಂತರದಿಂದ ಗೆದ್ದು ಕಾಸ್ಕಾರ್ಡ್ ಬ್ಯಾಂಕ್ ನಿರ್ದೇಶಕರ ಸ್ಥಾನವನ್ನು ಅಲಂಕರಿಸಿದ್ದಾರೆ .
ಈ ಹಿಂದೆ ಕಾಸ್ಕಾರ್ಡ್ ಬ್ಯಾಂಕಿನ ನಿರ್ದೇಶಕರಾಗಿ ಭಟ್ಕಳ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಈಶ್ವರ ನಾಯ್ಕ ಆಯ್ಕೆಯಾಗಿ ನಂತರ ಉಪಾಧ್ಯಕ್ಷರಾಗಿದ್ದರು. ಈಗ ಮತ್ತೊಮ್ಮೆ ಅದೃಷ್ಟ ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ಒಲಿದು ಬಂದಿದೆ. ನಿನ್ನೆ ನಡೆದ ರೋಚಕ ಚುನಾವಣೆ ಪೈಪೋಟಿ ನೋಡಿದರೆ ಸುನಿಲ್ ನಾಯ್ಕ ಕಾಸ್ಕಾರ್ಡ್ ಬ್ಯಾಂಕ್ನ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.