ಭಟ್ಕಳ: ಹೆಲ್ತ್ ಎಮರ್ಜೆನ್ಸಿ ಘೋಷಣೆಯಾಗಿರುವ ಭಟ್ಕಳದಲ್ಲಿ ಶೇಕಡಾ 100ರಷ್ಟು ಲಾಕ್ಡೌನ್ ಆಗಿದೆ. ಅನಗತ್ಯವಾಗಿ ರಸ್ತೆ ಮೇಲೆ ಓಡಾಡುವವರ ವಿರುದ್ಧ ಪೊಲೀಸ್ ಇಲಾಖೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಶಾಸಕ ಸುನಿಲ್ ನಾಯ್ಕ್ ಹೇಳಿದ್ದಾರೆ.
ಪಟ್ಟಣದ ವಿವಿಧ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಗಮನಿಸಿದ ಸುನಿಲ್ ನಾಯ್ಕ್, ಪರಿಸ್ಥಿತಿ ಗಂಭೀರ ಇರುವ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿಯೇ ಇದ್ದು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಪರಿಸ್ಥಿತಿಯನ್ನು ಗಮನಿಸಿದ ಸುನಿಲ್ ನಾಯ್ಕ್ ಪಟ್ಟಣದಲ್ಲಿ ಈಗಾಗಲೇ ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಅವರ ಸಂಪರ್ಕದಲ್ಲಿದ್ದವರನ್ನ ಸಹ ಗುರುತಿಸಿ ಅವರ ಗಂಟಲು ದ್ರವದ ಪರೀಕ್ಷೆಗೆ ಕಳುಹಿಸಲಾಗಿದೆ.
ಪರಿಸ್ಥಿತಿಯನ್ನು ಗಮನಿಸಿದ ಸುನಿಲ್ ನಾಯ್ಕ್ ಪಟ್ಟಣದಲ್ಲಿ ಜನರು ಅನವಶ್ಯಕವಾಗಿ ಓಡಾಡಿದ್ರೆ ಸೋಂಕು ಹರಡುವ ಸಾಧ್ಯತೆ ಇದ್ದು, ಜನರು ಮನೆಯಲ್ಲಿ ಇರುವುದೇ ಸೂಕ್ತ. ಜನರಿಗೆ ಸಮಸ್ಯೆ ಆಗದಂತೆ ಕ್ರಮಗಳನ್ನ ತೆಗೆದುಕೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಸುನಿಲ್ ನಾಯ್ಕ್ ಹೇಳಿದ್ದಾರೆ.