ಶಿರಸಿ :ಉತ್ತರ ಕನ್ನಡದ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಕಳೆದು ಹೋಗಿದ್ದು, ಅವರನ್ನ ಹುಡುಕಿ ಕೊಡಿ ಎಂದು ದೂರು ನೀಡಿದ್ದ ಕಾಂಗ್ರೆಸ್ ನಿಲುವಿಗೆ ಅತೃಪ್ತ ಶಾಸಕ ಶಿವರಾಂ ಹೆಬ್ಬಾರ್ ಫೇಸ್ಬುಕ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಣೆಯಾಗಿಲ್ಲ, ಕಾರ್ಯಕರ್ತರೊಂದಿಗೆ ಟಚ್ನಲ್ಲಿದ್ದೇನೆ: ಹೆಬ್ಬಾರ್ - undefined
ಉತ್ತರ ಕನ್ನಡದ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಕಳೆದು ಹೋಗಿದ್ದು, ಅವರನ್ನ ಹುಡುಕಿ ಕೊಡಿ ಎಂದು ದೂರು ನೀಡಿದ್ದ ಕಾಂಗ್ರೆಸ್ ನಿಲುವಿಗೆ ಅತೃಪ್ತ ಶಾಸಕ ಶಿವರಾಂ ಹೆಬ್ಬಾರ್ ಫೇಸ್ಬುಕ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಫೇಸ್ಬುಕ್ನ ತಮ್ಮ ವಾಲ್ನಲ್ಲಿ ಬರೆದುಕೊಂಡಿರೋ ಶಾಸಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನನ್ನ ಬಗ್ಗೆ ಅಭೂತಪೂರ್ವ ರಾಜಕೀಯ ಕಾಳಜಿ ತೋರಿದ್ದಾರೆ. ಈ ಒಂದು ವಿಶೇಷ ಕಾಳಜಿ ಆಶ್ಚರ್ಯಕರ. ನಾನು ಕ್ಷೇತ್ರದಿಂದ ಹೊರಗಿದ್ದರೂ ಕೂಡ ಅಧಿಕಾರಿಗಳ ಹಾಗೂ ಕಾರ್ಯಕರ್ತರ ನಿರಂತರ ಸಂಪರ್ಕದಲ್ಲಿದ್ದೇನೆ.
ಮಳೆಯಿಂದಾದ ಹಾನಿಗೆ ತುರ್ತು ಸ್ಪಂದನೆಗೆ ಅಧಿಕಾರಿಗಳ ಮೂಲಕ ಕ್ರಮ ಕೈಗೊಂಡಿದ್ದೇನೆ.ಶಾಸಕ ಹೆಬ್ಬಾರ್ ಅವರನ್ನು ಹುಡುಕಿ ಕೊಡಿ ಎಂದು ಶಿರಸಿ ಡೈವೈಎಸ್ಪಿ ಜಿ.ಟಿ.ನಾಯಕ ಅವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ದೂರನ್ನು ಸಲ್ಲಿಸಲಾಗಿತ್ತು. ಅದಕ್ಕೆ ಶಾಸಕರು ಮುಂಬೈನಲ್ಲಿದ್ದುಕೊಂಡೆ ಪ್ರತಿಕ್ರಿಯೆ ನೀಡಿದ್ದಾರೆ.