ಕರ್ನಾಟಕ

karnataka

ETV Bharat / state

ಸಖತ್ ಡ್ಯಾನ್ಸ್ ಮಾಡಿದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ: ವಿಡಿಯೋ ವೈರಲ್ - ರೂಪಾಲಿ ನಾಯ್ಕ ವೈರಲ್​​ ವಿಡಿಯೋ

ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಡ್ಯಾನ್ಸ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

mla roopali nayka dance video viral
ಬಿಜೆಪಿ ಶಾಸಕಿ ರೂಪಾಲಿ ನಾಯ್ಕ

By

Published : Mar 23, 2021, 11:05 AM IST

ಕಾರವಾರ: ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನೃತ್ಯ ತಂಡದೊಂದಿಗೆ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಡ್ಯಾನ್ಸ್ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಡ್ಯಾನ್ಸ್​

ನಗರದ ಜಿಲ್ಲಾ ರಂಗಮಂದಿರದಲ್ಲಿ ನಮಿತಾಸ್ ಫೆಮ್ಮಿ ಫಿಟ್ನೆಸ್ ಸಂಸ್ಥೆಯು ಮಹಿಳಾ ದಿನಾಚರಣೆ ನಿಮಿತ್ತ ಮಾ.20 ಹಾಗೂ 21ರಂದು ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಡ್ಯಾನ್ಸ್, ಫ್ಯಾಷನ್ ಶೋ ಆಯೋಜಿಸಿತ್ತು. ಗ್ರೂಪ್ ಡ್ಯಾನ್ಸ್ ವಿಭಾಗದಲ್ಲಿ ನಮಿತಾ ಫೆಮ್ಮಿ ಫಿಟ್ನೆಸ್ ಸಂಸ್ಥೆಯ ಸದಸ್ಯರೇ ಹೆಜ್ಜೆ ಹಾಕಿದ್ದಾರೆ‌. ಈ ವೇಳೆ ಶಾಸಕಿ ರೂಪಾಲಿ ನಾಯ್ಕ ಕೂಡ ಜೊತೆಯಾಗಿದ್ದು, ಒಂದೂವರೆ ನಿಮಿಷಗಳ ಹಾಡಿಗೆ ಕೊನೆಯವರೆಗೂ ಡ್ಯಾನ್ಸ್ ಮಾಡಿದ್ದಾರೆ. ಶಾಸಕಿಯ ಈ ಡ್ಯಾನ್ಸ್‌ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಾಸಕಿ ರೂಪಾಲಿ ನಾಯ್ಕ ಈ ಹಿಂದೆ 2018ರಲ್ಲಿ ಕಾರವಾರದ ಮಯೂರವರ್ಮ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಕರಾವಳಿ ಉತ್ಸವದಲ್ಲಿಯೂ ಸೈರಾಟ್ ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದ್ದರು. ಇದಲ್ಲದೇ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ದಾಖಲೆಯ ಮತಗಳ ಅಂತರದಿಂದ ಆಯ್ಕೆಯಾದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಕಾರವಾರದಲ್ಲಿ ಆಯೋಜಿಸಿದ್ದ ವಿಜಯೋತ್ಸವದಲ್ಲೂ ಕಾರ್ಯಕರ್ತೆಯರೊಂದಿಗೆ ಬ್ಯಾಂಡ್​ಗಳ ಸದ್ದಿಗೆ ಶಾಸಕಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು.

ABOUT THE AUTHOR

...view details