ಕಾರವಾರ: ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಮರಾಠಿಗರು ಯಾವತ್ತೂ ಕರ್ನಾಟಕದವರೇ. ಬೆಳಗಾವಿ, ಕಾರವಾರ ಸೇರಿದಂತೆ ರಾಜ್ಯದ ಗಡಿ ಭಾಗಗಳಲ್ಲಿರುವ ಕರ್ನಾಟಕದ ಜನರನ್ನು ಬೇರೆ ಮಾಡಲು ಮಹಾರಾಷ್ಟ್ರದ ಮರಾಠಿಗರು ಹುನ್ನಾರ ನಡೆಸಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದಾರೆ.
ಕರ್ನಾಟಕದಲ್ಲಿರುವ ಮರಾಠಿಗರೂ ಕನ್ನಡಿಗರೇ: ಶಾಸಕಿ ರೂಪಾಲಿ ನಾಯ್ಕ - ಮರಾಠ ಪ್ರಾಧಿಕಾರ ವಿವಾದದ ಬಗ್ಗೆ ಕಾರವಾರ ಶಾಸಕಿ ಹೇಳಿಕೆ
ಗಡಿ ಬಗ್ಗೆ ತಗಾದೆ ತೆಗೆದು ಕನ್ನಡಿಗರಲ್ಲಿ ಕೋಲಾಹಲ ಎಬ್ಬಿಸಲು ಮರಾಠಿಗರು ಹುನ್ನಾರ ನಡೆಸುತ್ತಿದ್ದಾರೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ಆರೋಪಿಸಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ಅವರು, ರಾಜ್ಯದ ಗಡಿ ಭಾಗದ ಬಗ್ಗೆ ಮತ್ತೆ ಮಹಾರಾಷ್ಟ್ರ ತಗಾದೆ ತೆಗೆಯುತ್ತಿದೆ. ಕನ್ನಡಿಗರಲ್ಲಿ ಕೋಲಾಹಲ ಎಬ್ಬಿಸಲು ಮರಾಠಿಗರು ಹುನ್ನಾರ ನಡೆಸುತ್ತಿದ್ದಾರೆ. ಕರ್ನಾಟಕದ ಗಡಿ ಭಾಗ ಎಂದಿಗೂ ಮಹಾರಾಷ್ಟ್ರದ್ದಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮರಾಠ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಮಹಾರಾಷ್ಟ್ರ ಡಿಸಿಎಂ ಕಾರವಾರ ಮತ್ತು ಬೆಳಗಾವಿ ಗಡಿ ಭಾಗ ತಮ್ಮದು ಎಂಬ ಹೇಳಿಕೆ ನೀಡಿರುವುದು ಒಪ್ಪುವಂತದ್ದಲ್ಲ. ಕರ್ನಾಟಕದಲ್ಲಿರುವ ಮರಾಠಿಗರೆಲ್ಲರೂ ಕನ್ನಡಿಗರೇ. ಬೆಳಗಾವಿ, ಕಾರವಾರವನ್ನು ತಮ್ಮದಾಗಿಸಿಕೊಳ್ಳುವ ಮರಾಠಿಗರ ಕನಸನ್ನು ಈಗಾಗಲೇ ಸಿಎಂ ಯಡಿಯೂರಪ್ಪ ನುಚ್ಚುನೂರು ಮಾಡಿದ್ದಾರೆ. ಮಹಾರಾಷ್ಟ್ರದವರು ಕರ್ನಾಟಕದ ಗಡಿ ಭಾಗಕ್ಕೆ ಕಣ್ಣು ಹಾಕುವುದು ಬಿಟ್ಟು, ತಮ್ಮ ಗಡಿಯನ್ನು ಕಾದುಕೊಳ್ಳಲಿ ಎಂದು ಹೇಳಿದರು.
TAGGED:
ಕರ್ನಾಟಕದ ಮಹರಾಷ್ಟ್ರ ಗಡಿ ವಿವಾದ