ಭಟ್ಕಳ (ಉತ್ತರಕನ್ನಡ):ಮಳೆಯಲ್ಲೂ ಯಕ್ಷಗಾನ ವೀಕ್ಷಿಸಿ, ಯಕ್ಷ ವೇಷ ತೊಡುವ ಮೂಲಕ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಗಮನ ಸೆಳೆದಿದ್ದಾರೆ.
ಸರ್ಕಾರಿ ಆಸ್ಪತ್ರೆ ಭೇಟಿ ಹಾಗೂ ಪರಿಶೀಲನೆ ಹಿನ್ನೆಲೆ ಮಂಗಳವಾರ ಭಟ್ಕಳಕ್ಕೆ ತೆರಳಿದ್ದರು. ಸಚಿವರು ಜಾಲಿಯಲ್ಲಿ ಆಯೋಜಿಸಿದ್ದ ತಡರಾತ್ರಿ ಯಕ್ಷಗಾನವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಭಟ್ಕಳ ಶಾಸಕ ಸುನೀಲ್ ನಾಯ್ಕ ಜೊತೆ ವೀಕ್ಷಣೆ ಮಾಡಿದರು. ಕಲಾವಿದರು ಭೀಷ್ಮ ವಿಜಯ ಯಕ್ಷಗಾನವನ್ನು ಪ್ರದರ್ಶಿಸಿದರು. ಈ ವೇಳೆ ಮಳೆಯಾಗುತ್ತಿದ್ದರೂ, ಅದನ್ನು ಲೆಕ್ಕಿಸದೆ ಸಚಿವರು ಯಕ್ಷಗಾನ ವೀಕ್ಷಿಸಿದರು.