ಶಿರಸಿ:ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಯಾಗುವಂತೆ ನೋಡಿಕೊಳ್ಳುವ ಸವಾಲನ್ನು ನಾನು ಸ್ವೀಕರಿಸಿದ್ದು, ನಿಶ್ಚಿತವಾಗಿ ರೈತರಿಗೆ ಸರಿಯಾದ ಸಮಯದಲ್ಲಿ ಹಣ ಸಿಗುವಂತೆ ಮಾಡಲಿದ್ದೇವೆ ಎಂದು ನೂತನ ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ರೈತರಿಗೆ ಸರಿಯಾದ ಸಮಯದಲ್ಲಿ ಹಣ ಪಾವತಿಸುವ ಸವಾಲನ್ನು ಸ್ವೀಕರಿಸುತ್ತೇನೆ : ಸಚಿವ ಹೆಬ್ಬಾರ್ - ಸಚಿವ ಶಿವರಾಮ ಹೆಬ್ಬಾರ್
ಸವಾಲನ್ನು ಸ್ವೀಕರಿಸುವ ಮನುಷ್ಯ ಎನ್ನುವ ಕಾರಣಕ್ಕಾಗಿಯೇ ನನಗೆ ಮುಖ್ಯಮಂತ್ರಿಗಳು ಸಕ್ಕರೆ ಖಾತೆ ನೀಡಿದ್ದು, ರೈತರಿಗೆ ಸರಿಯಾದ ಸಮಯದಲ್ಲಿ ಹಣ ಪಾವತಿಸುವ ಸವಾಲನ್ನು ಸ್ವೀಕರಿಸುತ್ತೇನೆ ಎಂದು ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಶಿರಸಿಯ ಬನವಾಸಿಯಲ್ಲಿ ಮಾತನಾಡಿದ ಅವರು, ಸವಾಲನ್ನು ಸ್ವೀಕರಿಸುವ ಮನುಷ್ಯ ಎನ್ನುವ ಕಾರಣಕ್ಕಾಗಿಯೇ ನನಗೆ ಮುಖ್ಯಮಂತ್ರಿಗಳು ಸಕ್ಕರೆ ಖಾತೆ ನೀಡಿದ್ದು, ರೈತರಿಗೆ ಸರಿಯಾದ ಸಮಯದಲ್ಲಿ ಹಣ ಪಾವತಿಸುವ ಸವಾಲನ್ನು ಸ್ವೀಕರಿಸುತ್ತೇನೆ ಎಂದರು. ಶಾಸಕನಾಗಿದ್ದು, ಮಂತ್ರಿಯಾಗಿದ್ದು ಎಲ್ಲವೂ ಸವಾಲಿನ ಕಾರ್ಯವೇ ಆಗಿದ್ದು, ಅದರ ಜೊತೆಗೆ ಸಕ್ಕರೆ ಖಾತೆಯ ಜವಾಬ್ದಾರಿಯ ಸವಾಲನ್ನೂ ಸ್ವೀಕರಿಸುತ್ತಿದ್ದೇನೆ ಎಂದು ನಗೆ ಚಟಾಕಿ ಹಾರಿಸಿದರು.
ಸಕ್ಕರೆ ಖಾತೆ ನಾಲ್ಕು ವರ್ಷಗಳ ಹಿಂದಿರುವ ಸ್ಥಿತಿಯಲ್ಲಿ ಇಲ್ಲ. ಕರ್ನಾಟಕ ರಾಜ್ಯದಲ್ಲಿ ಸಕ್ಕರೆ ಖಾತೆಯಿಂದ ನೀಡಬೇಕಾಗಿದ್ದ ಹಣದಲ್ಲಿ ಶೇ.93 ರಷ್ಟು ರೈತರಿಗೆ ಪಾವತಿಸಲಾಗಿದೆ. ಕೇವಲ 2019-20ನೇ ಸಾಲಿನ 12.11ಕೋಟಿ ಹಣ ಮಾತ್ರ ಬಾಕಿಯಿದೆ ಎಂದು ಹೇಳಿದರು.