ಕರ್ನಾಟಕ

karnataka

ETV Bharat / state

ಬಿಜೆಪಿಯಲ್ಲಿ ಭಿನ್ನಮತ ಇದೆ ಎನ್ನುವುದು ಕೇವಲ ಊಹಾಪೋಹ: ಸಚಿವ ಹೆಬ್ಬಾರ್ - Minister Shivaram Hebbar statement

ಬಿಜೆಪಿಯಲ್ಲಿ ಭಿನ್ನಮತವಿದೆ ಇದೆ ಎನ್ನುವುದು ಮಾಧ್ಯಮಗಳ ಸೃಷ್ಟಿಯಾಗಿದ್ದು, ಯಾರಲ್ಲಿಯೂ ಯಾವುದೇ ಗೊಂದಲಗಳಿಲ್ಲ. ಕೆಲವೊಮ್ಮೆ ಚಿಕ್ಕಪುಟ್ಟ ಗೊಂದಲ, ಅಭಿಪ್ರಾಯ ಭೇದಗಳಿದ್ದರೂ ಅವನ್ನ ಆಂತರಿಕವಾಗಿ ಬಗೆಹರಿಸಿಕೊಳ್ಳುವುದು ರಾಜಕೀಯ ವಲಯದ ರೂಢಿಯಾಗಿದೆ ಎಂದು ಸಚಿವ ಶಿವರಾಂ ಹೆಬ್ಬಾರ್​ ಹೇಳಿದರು.

Minister Shivaram Hebbar statement
ಬಿಜೆಪಿಯಲ್ಲಿ ಭಿನ್ನಮತ ಕೇವಲ ಊಹಾಪೋಹ,ಮಾಧ್ಯಮ ಸೃಷ್ಟಿ: ಸಚಿವ ಹೆಬ್ಬಾರ್

By

Published : Jun 3, 2020, 7:37 PM IST

ಶಿರಸಿ(ಉತ್ತರ ಕನ್ನಡ):ಬಿಜೆಪಿಯಲ್ಲಿ ಭಿನ್ನಮತ ಇದೆ ಎನ್ನುವುದು ಊಹಾಪೋಹಗಳ ಬೆಳವಣಿಗೆಯಾಗಿದ್ದು, ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ ಎಂದು ಸಚಿವ ಶಿವರಾಂ ಹೆಬ್ಬಾರ್​ ಪ್ರತಿಕ್ರಿಯಿಸಿದರು.

ಬಿಜೆಪಿಯಲ್ಲಿ ಭಿನ್ನಮತ ಇಲ್ಲ: ಸಚಿವ ಹೆಬ್ಬಾರ್

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರಬುದ್ಧವಾಗಿ ಆಡಳಿತ ನೀಡಿದೆ. ಬಿಜೆಪಿಯಲ್ಲಿ ಭಿನ್ನಮತವಿದೆ ಎನ್ನುವುದು ಮಾಧ್ಯಮಗಳ ಸೃಷ್ಟಿಯಾಗಿದ್ದು, ಯಾರಲ್ಲಿಯೂ ಯಾವುದೇ ಗೊಂದಲಗಳಿಲ್ಲ. ಕೆಲವೊಮ್ಮೆ ಚಿಕ್ಕಪುಟ್ಟ ಗೊಂದಲ, ಅಭಿಪ್ರಾಯ ಭೇದಗಳಿದ್ದರೂ ಅವನ್ನ ಆಂತರಿಕವಾಗಿ ಬಗೆಹರಿಸಿಕೊಳ್ಳುವುದು ರಾಜಕೀಯ ವಲಯದ ರೂಢಿಯಾಗಿದೆ ಎಂದರು.

ಇನ್ನು ಶಾಲೆಗಳ ಆರಂಭದ ಕುರಿತು ಪಾಲಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಆ ನಂತರವೇ ಜುಲೈನಿಂದ ತರಗತಿಗಳ ಆರಂಭದ ಕುರಿತು ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ಶಿಕ್ಷಣ ಸಚಿವರೇ ತಿಳಿಸಿದ್ದಾರೆ. ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡಿರುವ ಶಿಕ್ಷಣ ಇಲಾಖೆ, ಏಕಾಏಕಿ ನಿರ್ಣಯ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

ABOUT THE AUTHOR

...view details