ಶಿರಸಿ :ಪೊಗರು ಚಿತ್ರದಲ್ಲಿ ಮಾತ್ರ ಪೊಗರು ತೋರಿಸಲಿ. ಆದರೆ ಬೇರೆ ಸಮಾಜದ ಮೇಲೆ, ಬ್ರಾಹ್ಮಣರ ಮೇಲೆ ಪೊಗರು ತೋರಿಸುವುದು ಅತ್ಯಂತ ಖಂಡನೀಯ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.
ಬ್ರಾಹ್ಮಣ ಸಮಾಜದ ಮೇಲೆ ಪೊಗರು ತೋರಿಸುವುದು ಖಂಡನೀಯ ; ಸಚಿವ ಹೆಬ್ಬಾರ್ - ಸಚಿವ ಶಿವರಾಮ ಹೆಬ್ಬಾರ್,
ಬ್ರಾಹ್ಮಣ ಸಮಾಜದ ಮೇಲೆ ಪೊಗರು ತೋರಿಸುವುದು ಖಂಡನೀಯ ಎಂದು ಸಚಿವ ಹೆಬ್ಬಾರ್ ಆಗ್ರಹಿಸಿದ್ದಾರೆ.
ಸಚಿವ ಹೆಬ್ಬಾರ್
ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಮೇಲಿನ ಅವಹೇಳನ ಖಂಡನೀಯ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಮೇಲೆ ಮಾಡಿರುವಂತಹ ಕೃತ್ಯವನ್ನು ಕಟ್ ಮಾಡಿ ಚಿತ್ರ ಬಿಡುಗಡೆ ಮಾಡಬೇಕು. ಇದಕ್ಕೆ ರಾಜ್ಯದ ಸಚಿವನಾಗಿ ಸಮಾಜದ ಮೇಲೆ ಆಗಿರುವ ಧೋರಣೆಯನ್ನು ಖಂಡಿಸುತ್ತೇನೆ ಹಾಗೂ ತಕ್ಷಣ ದೃಶ್ಯವನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.