ಶಿರಸಿ : ಅಡಿಕೆಯಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಿಸುವ ಅಂಶಗಳೂ ಇವೆ. ಹೀಗಾಗಿ, ಬೆಳೆಗಾರರು ಅಡಿಕೆ ಕುರಿತ ಆಕ್ಷೇಪಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ತೋಟಗಾರಿಕಾ ಇಲಾಖೆ ಸಚಿವ ಆರ್. ಶಂಕರ್ ಹೇಳಿದರು.
ಅಡಿಕೆಯಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಿಸುವ ಅಂಶವಿದೆ : ಸಚಿವ ಆರ್. ಶಂಕರ್ - ಮಾರಿಕಾಂಬ ದೇವಸ್ಥಾನಕ್ಕೆ ಸಚಿವ ಆರ್. ಶಂಕರ್ ಭೇಟಿ
ಅಡಿಕೆಯಿಂದ ಚಹಾ ಸೇರಿದಂತೆ ಹಲವು ಉತ್ಪನ್ನಗಳು ಸಿದ್ಧವಾಗುತ್ತಿವೆ. ಅಲ್ಲದೆ, ಅಡಿಕೆ ಸಕ್ಕರೆ ಕಾಯಿಲೆಯನ್ನೂ ನಿಯಂತ್ರಿಸುತ್ತದೆ ಎಂದು ಸಚಿವ ಆರ್. ಶಂಕರ್ ಹೇಳಿದ್ದಾರೆ.
ಸಚಿವ ಆರ್.ಶಂಕರ್
ನಗರದ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿ, ಅಡಿಕೆಯಿಂದ ಚಹಾ ಸೇರಿದಂತೆ ಹಲವು ಉತ್ಪನ್ನಗಳು ಸಿದ್ಧವಾಗುತ್ತಿವೆ. ಅಲ್ಲದೆ, ಅಡಿಕೆಗೆ ಸದ್ಯ ಉತ್ತಮ ದರವಿದೆ, ರೈತರು ಸಂತಸದಲ್ಲಿದ್ದಾರೆ. ತೋಟಗಾರಿಕೆ ಬೆಳೆಗಳ ಹಾನಿಗೆ ಹಂತ ಹಂತವಾಗಿ ಪರಿಹಾರ ನೀಡಲಾಗಿದೆ ಎಂದರು.
ರೇಷ್ಮೆ ಇಲಾಖೆಯನ್ನು ಬೇರೆ ಇಲಾಖೆ ಜೊತೆ ವಿಲೀನಗೊಳಿಸುವ ಪ್ರಸ್ತಾಪವಿಲ್ಲ. ಬೇರೆ ಬೇರೆ ಇಲಾಖೆಗೆ ತೆರಳಿರುವ ರೇಷ್ಮೆ ಇಲಾಖೆ ನೌಕರರನ್ನು ಮಾತೃ ಇಲಾಖೆಗೆ ಕರೆತರಲಾಗುವುದು ಎಂದು ತಿಳಿಸಿದರು.