ಕರ್ನಾಟಕ

karnataka

ETV Bharat / state

ಭಟ್ಕಳ: ಪೊಲೀಸ್​ ವಸತಿ ಗೃಹ ಉದ್ಘಾಟಿಸಿದ ಸಚಿವ ಡಾ.ಜಿ. ಪರಮೇಶ್ವರ್​​ - ಪೊಲೀಸ್​ ವಸತಿ ಗೃಹ ಉದ್ಘಾಟಿಸಿದ ಸಚಿವ ಜಿ ಪರಮೇಶ್ವರ್​​

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪೊಲೀಸ್​​​ ಮೈದಾನದಲ್ಲಿ ನಿರ್ಮಾಣಗೊಂಡಿದ್ದ ನೂತನ ಪೊಲೀಸ್​ ವಸತಿ ಗೃಹವನ್ನು ಸಚಿವ ಪರಮೇಶ್ವರ್​ ಸೋಮವಾರ ಉದ್ಘಾಟಿಸಿದರು.

inaugurated
ಸಚಿವರಿಂದ ಪೊಲೀಸ್​ ವಸತಿ ಗೃಹ ಉದ್ಘಾಟನೆ

By ETV Bharat Karnataka Team

Published : Dec 26, 2023, 9:02 AM IST

Updated : Dec 26, 2023, 12:49 PM IST

ಸಚಿವ ಪರಮೇಶ್ವರ್ ಅವರಿಂದ ನೂತನ ಪೊಲೀಸ್​ ಗೃಹ ಉದ್ಘಾಟನೆ

ಭಟ್ಕಳ(ಉತ್ತರ ಕನ್ನಡ) :ಗೃಹ ಸಚಿವ ಡಾ.ಜಿ. ಪರಮೇಶ್ವರ್​​​​ ಭಟ್ಕಳ ಪೊಲೀಸ್​​​ ಮೈದಾನದಲ್ಲಿ 3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಪೊಲೀಸ್​ ವಸತಿ ಗೃಹವನ್ನು ಸೋಮವಾರ ಉದ್ಘಾಟಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 46 ಸಾವಿರ ಪೊಲೀಸ್​​ ವಸತಿ ಗೃಹಗಳನ್ನು ಈಗಾಗಲೇ ನಮ್ಮ ಸರ್ಕಾರ ನಿರ್ಮಾಣ ಮಾಡಿದೆ. ಇದರಿಂದಾಗಿ ಪೊಲೀಸ್​​ ಸಿಬ್ಬಂದಿಗಳಿಗೆ ಕೆಲಸ ಮಾಡಲು ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಎಂದರು. ಅಂತರ ಜಿಲ್ಲಾ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬೇರೆ ಇಲಾಖೆಗೂ ಹಾಗೂ ನಮ್ಮ ಇಲಾಖೆಗೂ ವ್ಯತ್ಯಾಸವಿದ್ದು, ಯಾವುದೋ ಒಂದು ಪ್ರಕರಣ ವಿಚಾರಣೆ ಹಂತದಲ್ಲಿದ್ದ ವೇಳೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಇತಿಮಿತಿಗಳು ಬದಲಾವಣೆ ಆಗುವ ಸಂಭವವಿರುತ್ತದೆ. ಇದರಿಂದ ನಮ್ಮ ರಾಜ್ಯದಲ್ಲಿ ನಮ್ಮ ಇಲಾಖೆಯ ಅಂತರ ಜಿಲ್ಲಾ ವರ್ಗಾವಣೆಯನ್ನು ಅಚ್ಚುಕಟ್ಟಾಗಿ ಮುಂದಿನ ದಿನಗಳಲ್ಲಿ ನಡೆಸುತ್ತೇವೆ ಎಂದು ತಿಳಿಸಿದರು.

ಮುಂದುವರಿದು ಮಾತನಾಡಿದ ಗೃಹಸಚಿವರು, ಭಟ್ಕಳದಲ್ಲಿ ಕಳೆದ ಹಲವು ವರ್ಷಗಳಿಂದ ಸಿಸಿಟಿವಿ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದರ ಬಗ್ಗೆ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಚೆಕ್ ಪೋಸ್ಟ್ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಹಾಗೂ ಭಟ್ಕಳದಲ್ಲಿ ಟ್ರಾಫಿಕ್​​ ಪೊಲೀಸ್​ ಠಾಣೆ ನಿರ್ಮಾಣವಾಗುವುದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪೊಲೀಸ್​ ಇಲಾಖೆ ಹೊಸದಾಗಿ ಆಧುನೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಸಾವಿರಾರು ಸಿಸಿಟಿವಿ ಕ್ಯಾಮೆರಾ ಹಾಗೂ ಅದಕ್ಕೆ ಬೇಕಾಗುವ ತಂತ್ರಜ್ಞಾನ ಬೇಕಾಗುತ್ತದೆ. ಈ ಎಲ್ಲ ತಂತ್ರಜ್ಞಾನ ಅಳವಡಿಕೆ ಮಾಡುವುದರಿಂದ ಪ್ರತಿ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆಯ ಲಿಂಕ್​ ನಮ್ಮ ಬೆಂಗಳೂರು ಮಹಾ ನಿರ್ದೇಶಕರ ಕಛೇರಿಯಲ್ಲಿದ್ದು ವೀಕ್ಷಣೆ ಮಾಡಬಹುದಾಗಿದ್ದು. ಎಲ್ಲಾ ಬದಲಾವಣೆಯನ್ನು ಹಂತ ಹಂತವಾಗಿ ಮಾಡುತ್ತೇವೆ ಎಂದರು.

ಇದಕ್ಕೂ ಪೂರ್ವದಲ್ಲಿ ವಸತಿ ಗೃಹದ ಕೀಯನ್ನು ಪೊಲೀಸ್​ ಸಿಬ್ಬಂದಿಗಳಿಗೆ ಹಸ್ತಾಂತರ ಮಾಡಿದರು. ನಂತರ ವಸತಿ ಗೃಹದ ಮುಂಭಾಗದಲ್ಲಿ ಗಿಡ ನೆಟ್ಟು ಖಾಸಗಿ ಕಾರ್ಯಕ್ರಮಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್​​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ವಿಷ್ಣುವರ್ಧನ್, ಭಟ್ಕಳ ಪ್ರಾಭಾರಿ ಡಿವೈಎಸ್ಪಿ ವೆಲೆಂಟೈನ್ ಡಿಸೋಜ, ನಗರ ಹಾಗೂ ಗ್ರಾಮೀಣ ಠಾಣೆ ಸಿ.ಪಿ.ಐ ಗೋಪಿಕೃಷ್ಣ ಹಾಗೂ ಚಂದನ್ ಗೋಪಾಲ್, ಕಾಂಗ್ರೆಸ್​​ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್​​ ಭಟ್ಕಳ ಹಾಗೂ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಗೋವಿಂದ ನಾಯ್ಕ ಉಪಸ್ಥಿತರಿದ್ದರು.

ಇದನ್ನೂ ಓದಿ:ಹೊಸ ವರ್ಷ, ಕ್ರಿಸ್​ಮಸ್​ ಎಫೆಕ್ಟ್​​: ಕೊಡಗು ತುಂಬೆಲ್ಲಾ ಪ್ರವಾಸಿಗರು

Last Updated : Dec 26, 2023, 12:49 PM IST

ABOUT THE AUTHOR

...view details