ಕರ್ನಾಟಕ

karnataka

ETV Bharat / state

ಏಳು‌ ದಿನ ಕಳೆದರೂ ಪತ್ತೆಯಾಗದ ಪೈಲಟ್: ನೌಕಾದಳದಿಂದ ಮುಂದುವರಿದ ಶೋಧ ಕಾರ್ಯ - search for missing pilot continues

ನವೆಂಬರ್ 26ರಂದು ಅಪಘಾತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಪೈಲಟ್, ಸಹ ಪೈಲಟ್ ಜೊತೆಗೆ ಸಮುದ್ರಕ್ಕೆ ಹಾರಿದ್ದರೆ ಎನ್ನಲಾಗಿತ್ತು. ಆದರೆ, ಏಳು‌ ದಿನ ಕಳೆದರೂ ಪೈಲಟ್ ಪತ್ತೆಯಾಗಿಲ್ಲ.

mig-29k-crash-search-for-missing-pilot-continues
ಏಳು‌ ದಿನ ಕಳೆದರು ಪತ್ತೆಯಾಗದ ಪೈಲೆಟ್

By

Published : Dec 3, 2020, 4:20 PM IST

ಕಾರವಾರ: ಕಳೆದ ಏಳು ದಿನಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಪತನಗೊಂಡಿದ್ದ ಮಿಗ್ -29ಕೆ ಫೈಟರ್ ಜೆಟ್​ನಿಂದ ನಾಪತ್ತೆಯಾಗಿರುವ ಪೈಲಟ್ ಲೆಫ್ಟಿನೆಂಟ್‌ ಕಮಾಂಡರ್ ನಿಶಾಂತ್ ಸಿಂಗ್​​ಗಾಗಿ ನೌಕಾಪಡೆ ಶೋಧ ಕಾರ್ಯ ಮುಂದುವರಿಸಿದೆ.

ನವೆಂಬರ್ 26ರಂದು ಅಪಘಾತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಪೈಲಟ್ ತನ್ನ ಸಹ ಪೈಲಟ್ ಜೊತೆಗೆ ಸಮುದ್ರಕ್ಕೆ ಹಾರಿದ್ದರೆನ್ನಲಾಗಿತ್ತು. ಈ ವೇಳೆ ಸಹ ಪೈಲೆಟ್ ಬದುಕುಳಿದಿದ್ದು, ಅವರನ್ನು ನೌಕಾಪಡೆ ರಕ್ಷಣೆ ಮಾಡಿತ್ತು. ಆದರೆ, ಈವರೆಗೂ ನಿಶಾಂತ್ ಸಿಂಗ್ ಅವರ ಬಗ್ಗೆ ಯಾವುದೇ ಸುಳಿವು ನೌಕಾಪಡೆಗೆ ದೊರೆತಿಲ್ಲ.

ಲೆಫ್ಟಿನೆಂಟ್ ಕಮಾಂಡರ್ ಸಿಂಗ್ ಬಳಸಿದ ಇಜೆಕ್ಷನ್ ಸೀಟ್ ಅಥವಾ ಪ್ಯಾರಾಚೂಟ್ ಬಗ್ಗೆ ಕೂಡ ಯಾವುದೇ ಕುರುಹು ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಅಪಘಾತ ಸ್ಥಳದ ತುರ್ತು ಸಂದರ್ಭದಲ್ಲಿ ಮಾಹಿತಿ ನೀಡುವ ಫೈಟರ್ ಜೆಟ್​ನ ಲೊಕೇಟರ್ ಬೀಕನ್ ನಿಂದ ಯಾವುದೇ ಸಿಗ್ನಲ್ ಕೂಡ ಬಂದಿಲ್ಲವೆನ್ನಲಾಗಿದೆ. ನಿಶಾಂತ್ ಜೆಟ್‌ನಿಂದ ಹೊರ ಬೀಳುತ್ತಿರುವುದನ್ನು ತಾನು ನೋಡಿರುವುದಾಗಿ ರಕ್ಷಣೆಗೊಂಡ ಸಹ ಪೈಲಟ್ ನೌಕಾಪಡೆಗೆ ತಿಳಿಸಿದ್ದಾರೆ.

ಓದಿ: ಮಿಗ್-29ಕೆ ಪತನ: ಪೈಲೆಟ್​ಗಾಗಿ ಮುಂದುವರಿದ ಶೋಧ ಕಾರ್ಯಾಚರಣೆ

ಅವಳಿ ಎಂಜಿನ್ ಜೆಟ್ ಸಂಜೆ 4.30ರ ಸುಮಾರಿಗೆ ಐಎನ್ಎಸ್ ವಿಕ್ರಮಾದಿತ್ಯದಿಂದ ಗೋವಾದ ಐಎನ್ಎಸ್ ಹನ್ಸಾಗೆ ತೆರಳಿತ್ತು. ಹನ್ಸಾ, ರಷ್ಯಾ ನಿರ್ಮಿತ 45 ಬಲಶಾಲಿ ಜೆಟ್‌ಗಳ ನೌಕಾಪಡೆಯ ನೆಲೆಯಾಗಿದೆ. ನೌಕಾಪಡೆಯ ಡೈವರ್‌ಗಳು ಇಲ್ಲಿಂದ 50 ಕಿ.ಮೀ. ದೂರದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ. ಲೆಫ್ಟಿನೆಂಟ್ ಕಮಾಂಡರ್ ಸಿಂಗ್ ಅವರು ತಮ್ಮ ದೀರ್ಘಕಾಲದ ಸ್ನೇಹಿತೆ ನಯಾಬ್ ರಾಂಧಾವಾ ಅವರನ್ನು ಮೇ ತಿಂಗಳಲ್ಲಿ ವಿವಾಹವಾಗಿದ್ದರು. ಈ ಇಬ್ಬರೂ ನಿವೃತ್ತ ನೌಕಾಧಿಕಾರಿಗಳ ಪುತ್ರರು. ನಯಾಬ್ ಅವರ ತಂದೆ ಮುಂಬೈನಲ್ಲಿ ನೆಲೆಸಿದ್ದು, ಲೆಫ್ಟಿನೆಂಟ್ ಕಮಾಂಡರ್ ಸಿಂಗ್ ಅವರ ತಂದೆ ನೋಯ್ಡಾದಲ್ಲಿದ್ದಾರೆ.

ABOUT THE AUTHOR

...view details