ಕಾರವಾರ:ಮಾನಸಿಕ ಅಸ್ವಸ್ಥ ಯುವಕನೋರ್ವ ಕಾಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಕಾಜುಭಾಗದ ಕಾಳಿ ಸೇತುವೆ ಬಳಿ ನಡೆದಿದೆ.
ಕಾಳಿ ನದಿಗೆ ಹಾರಲು ಯತ್ನಿಸಿದ ಮಾನಸಿಕ ಅಸ್ವಸ್ಥ ಯುವಕ - karwar kali river suicide attempt news
ಮಾನಸಿಕ ಅಸ್ವಸ್ಥ ಯುವಕನೋರ್ವ ಕಾಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾರವಾರದ ಕಾಜುಭಾಗದ ಕಾಳಿ ಸೇತುವೆ ಬಳಿ ನಡೆದಿದೆ. ಆದ್ರೆ ಸ್ಥಳೀಯರು ಜಾಗರೂಕತೆಯಿಂದ ಆತನನ್ನು ಬದುಕುಳಿಸಿದ್ದಾರೆ.
ಕಾಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ
ನಗರದ ಕಾಜುಭಾಗದ ನಿವಾಸಿ ಅವಿನಾಶ್ ಮೆನನ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಈತ ಮದ್ಯ ಸೇವಿಸಿ ಕಾಳಿ ಸೇತುವೆ ಮೇಲಿನಿಂದ ನದಿಗೆ ಹಾರಲು ಯತ್ನಿಸಿದ್ದ. ಈ ವೇಳೆ ಸ್ಥಳೀಯರು ಹಾಗೂ ಸೇತುವೆ ಮೇಲೆ ಸಂಚಾರ ಮಾಡುವವರು ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ಅವರಿಗೆ ಬೆದರಿಕೆ ಹಾಕಿದ್ದ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೊನೆಗೂ ಸಾರ್ವಜನಿಕರು ಹರಸಾಹಸಟ್ಟು ಸೇತುವೆ ಮೇಲಿಂದ ಯುವಕನನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕ್ರರಣ ದಾಖಲಾಗಿದೆ.