ಕರ್ನಾಟಕ

karnataka

ETV Bharat / state

ಮಾನಸಿಕವಾಗಿ ನೊಂದು ಇಂಜಿನಿಯರ್ ಆತ್ಮಹತ್ಯೆ - ಇಂಜಿನಿಯರ್ ಆತ್ಮಹತ್ಯೆ

ಮಾನಸಿಕವಾಗಿ ನೊಂದ ಯುವ ಇಂಜಿನಿಯರ್ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ‌ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

ಮೃತ ಇಂಜಿನಿಯರ್

By

Published : Jul 30, 2019, 11:52 PM IST

ಶಿರಸಿ : ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಮಾನಸಿಕವಾಗಿ ನೊಂದು ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ‌ ಜಿಲ್ಲೆಯ ಶಿರಸಿಯ ಕಸ್ತೂರಬಾ ನಗರದ ವಡ್ಡರ ಓಣಿಯಲ್ಲಿ ನಡೆದಿದೆ.

ವಡ್ಡರ ಓಣಿಯ ವಿಷ್ಣುಪ್ರಸಾದ ವಡ್ಲೂರ (30) ಮೃತ ಯುವಕ. ಈತ ಶಿರಸಿಯ ಸ್ವಪ್ನ ಇಂಡಿಸ್ಟ್ರೀಸ್​ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಎಂದಿನಂತೆ ಟಿವಿ ನೋಡಿ ಮಲಗಲು ಹೋದವನು ಮಾನಸಿಕವಾಗಿ ನೊಂದು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯ ಜಂತಿಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details