ಕಾರವಾರ :ಬಾವಿಗೆ ಹಾರಿ ಎರಡು ಗಂಟೆಗಳ ಕಾಲ ಚೀರಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಕೊನೆಗೂ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಯಲ್ಲಾಪುರದ ಉದ್ಯಮನಗರದಲ್ಲಿ ನಡೆದಿದೆ.
ಯಲ್ಲಾಪುರ ನಗರದ ಉದ್ಯಮನಗರ ಸುನಂದಾ ಪಟಗಾರ್(34) ರಕ್ಷಣೆಗೊಳಗಾದ ಮಹಿಳೆ. ಮಾನಸಿಕ ಅಸ್ವಸ್ಥತೆಯಾಗಿದ್ದ ಈಕೆ ಮನೆಯಿಂದ ಹೊರ ಬಂದು ಸಮೀಪದಲ್ಲಿರುವ ಬಾವಿಗೆ ಹಾರಿದ್ದಾಳೆ ಎನ್ನಲಾಗಿದೆ. ಮನೆಯಿಂದ ಹೋದವಳು ಬಾರದೇ ಇರುವುದರಿಂದ ಮನೆಯವರು ಹುಡುಕಾಟ ನಡೆಸಿದ್ದಾರೆ.
ಇತ್ತ ಬಾವಿಯಲ್ಲಿ ಬಿದ್ದಿದ್ದ ಮಹಿಳೆ ಎರಡು ಗಂಟೆಗೂ ಹೆಚ್ಚುಕಾಲ ಕೂಗಾಟ ನಡೆಸಿದ್ದು, ಕೊನೆಗೆ ಮನೆಯವರಿಗೆ ಬಾವಿಯಲ್ಲಿನ ಚೀರಾಟದ ಸದ್ದು ಕೇಳಿ ವಿಷಯ ಬೆಳಕಿಗೆ ಬಂದಿದೆ.
ಬಾವಿಗೆ ಹಾರಿದ್ದ ಮಾನಸಿಕ ಅಸ್ವಸ್ಥೆಯ ರಕ್ಷಣೆ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿದ್ದ ಮಹಿಳೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ. ಬಾವಿಯಲ್ಲಿ ಕಡಿಮೆ ನೀರಿರುವ ಕಾರಣ ಮಹಿಳೆಗೆ ಹೆಚ್ಚಿನ ತೊಂದರೆಯಾಗಿಲ್ಲ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಯಲ್ಲಾಪುರ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಭೀಮರಾವ್ ವಾ ಯು ಉಪ್ಪಾರ್, ಸಿಬ್ಬಂದಿಗಳಾದ ಹನುಮಂತನಾಯ್ಕ, ಉಲ್ಲಾಸ್ ವೈ ನಾಗೇಕರ್, ನಾಗೇಶ್ ದೇವಾಡಿಗ, ಪ್ರಶಾಂತ್ ಬಾರ್ಕಿ, ಲಗುಮಣ್ಣ ಇದ್ದರು.