ಕರ್ನಾಟಕ

karnataka

ETV Bharat / state

ಅಭಿವೃದ್ಧಿ ಕಾಮಗಾರಿಗಳಿಗೆ ಧಾರ್ಮಿಕತೆ ಲೇಪನ ಹಚ್ಚಿ ಸ್ಥಗಿತಗೊಳಿಸಬೇಡಿ : ಜಿಲ್ಲಾಧಿಕಾರಿ - ಸದಸ್ಯರ ಸಮಾಲೋಚನೆ ಸಭೆ

ಪ್ರಜಾಪ್ರಭುತ್ವದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ಅಧಿಕಾರಿಗಳ ಏಕ ನಿರ್ಣಯ ಸಾಧ್ಯವಿಲ್ಲ. ಪ್ರತಿ ಯೋಜನೆಗೂ ಜನಪ್ರತಿನಿಧಿಗಳ ಅಭಿಮತ ಮುಖ್ಯ. ಯೋಜನೆ ಜಾರಿಗೊಳಿಸುವಾಗ ಅಡೆತಡೆಗಳು ಸಹಜ. ಜನಪ್ರತಿನಿಧಿಗಳು ಅದನ್ನು ನಿಭಾಯಿಸಿ, ನಗರದ ಅಭಿವೃದ್ಧಿಗೆ ಕೈಜೋಡಿಸಬೇಕು..

member-consultation-meeting-in-jolly-town-panchayat
ಜಿಲ್ಲಾಧಿಕಾರಿ ಡಾ.ಹರೀಶ್​ಕುಮಾರ್

By

Published : Jan 1, 2021, 4:30 PM IST

ಭಟ್ಕಳ (ಉತ್ತರಕನ್ನಡ) :ತಾಲೂಕಿನ ಜಾಲಿ ಪಟ್ಟಣ ಪಂಚಾಯತ್​ನಲ್ಲಿ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಡಾ.ಹರೀಶ್​ಕುಮಾರ್​ಸಮಾಲೋಚನೆ ಸಭೆ ನಡೆಸಿದರು.

ಅಭಿವೃದ್ದಿ ಕಾಮಗಾರಿಗಳಿಗೆ ಧಾರ್ಮಿಕತೆ ಲೇಪನ ಹಚ್ಚಿ ಸ್ಥಗಿತಗೊಳಿಸುವ ಕ್ರಮ ಸರಿಯಲ್ಲ .. ಜಿಲ್ಲಾಧಿಕಾರಿ

ಸಭೆಯಲ್ಲಿ ಮಾತನಾಡಿದ ಅವರು, ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 200 ಕೋಟಿ ರೂ. ಅನುದಾನದ ಯುಜಿಡಿ ಒಳಚರಂಡಿ ಕಾಮಗಾರಿ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕೆ ಧಾರ್ಮಿಕತೆಯ ಲೇಪನ ಹಚ್ಚಿ ಯೋಜನೆ ಸ್ಥಗಿತಗೊಳಿಸುವ ಕ್ರಮ ಸರಿಯಲ್ಲ. ನಗರ ಅಭಿವೃದ್ಧಿಯಾದ್ರೆ ಮುಂದಿನ ಪೀಳಿಗೆಗೆ ಬದುಕಲು ಅನುವು ಮಾಡಿದಂತಾಗುತ್ತದೆ. ನಗರವು ಬೆಳೆದಂತೆ ಅದಕ್ಕೆ ತಕ್ಕನಾದಂತಹ ಮೂಲಸೌಕರ್ಯ ಇರಬೇಕು.

ಪ್ರಜಾಪ್ರಭುತ್ವದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ಅಧಿಕಾರಿಗಳ ಏಕ ನಿರ್ಣಯ ಸಾಧ್ಯವಿಲ್ಲ. ಪ್ರತಿ ಯೋಜನೆಗೂ ಜನಪ್ರತಿನಿಧಿಗಳ ಅಭಿಮತ ಮುಖ್ಯ. ಯೋಜನೆ ಜಾರಿಗೊಳಿಸುವಾಗ ಅಡೆತಡೆಗಳು ಸಹಜ. ಜನಪ್ರತಿನಿಧಿಗಳು ಅದನ್ನು ನಿಭಾಯಿಸಿ, ನಗರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಪಟ್ಟಣ ಪಂಚಾಯತ್ ಕಚೇರಿಯ ಹೊಸಕಟ್ಟಡ ನಗರದ ಮಧ್ಯಭಾಗದಲ್ಲಿ ಆದರೆ ಜನರಿಗೆ ಅನುಕೂಲ ಎಂಬ ಸದಸ್ಯರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಕೆಲಸಕ್ಕಾಗಿ ಜನರು ಕಚೇರಿ ಅಲೆದಾಡಬಾರದು. ಎಲ್ಲವೂ ಈಗ ಡಿಜಿಟಲೈಜ್ ಆಗಿದೆ. ಎಲ್ಲಾ ದಾಖಲೆಗಳು ಆನ್​ಲೈನ್​ನಲ್ಲೇ ಸಿಗುತ್ತವೆ. ಸದಸ್ಯರು ಜನರಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.

ABOUT THE AUTHOR

...view details