ಕರ್ನಾಟಕ

karnataka

ETV Bharat / state

ಸರ್ಕಾರಿ ವೆಬ್​ಸೈಟ್​ನಿಂದ ಮಜರೆ ಮಾಯ: ಗ್ರಾಮಸ್ಥರಿಗೆ ಎದುರಾಗಿದೆ ಅಸ್ತಿತ್ವದ ಪ್ರಶ್ನೆ...! - devanahalli gram panchayath

ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮದ ಡಿಪೋಬೈಲ್ ಮಜರೆ ಸರ್ಕಾರಿ ವೆಬ್​ಸೈಟ್​ನಲ್ಲಿ ನಾಪತ್ತೆಯಾಗಿದ್ದು, ವಾಸ್ತವ್ಯ ಪ್ರಮಾಣ ಪತ್ರ ಸೇರಿದಂತೆ ನೆಮ್ಮದಿ ಕೇಂದ್ರದಲ್ಲಿ‌ ದೊರೆಯುವ ವಿವಿಧ ಅಗತ್ಯ ದಾಖಲೆಗಳನ್ನು ಪಡೆಯಲು ಅಲ್ಲಿನ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

shirasi
ದೇವನಹಳ್ಳಿ ಗ್ರಾಮ ಪಂಚಾಯತ್

By

Published : Oct 29, 2020, 10:36 PM IST

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮದ ಡಿಪೋಬೈಲ್ ಮಜರೆ ಸರ್ಕಾರಿ ವೆಬ್​ಸೈಟ್​ನಲ್ಲಿ ಮಾಯವಾಗಿದ್ದು, ವಾಸ್ತವ್ಯ ಪ್ರಮಾಣ ಪತ್ರ ಸೇರಿದಂತೆ ನೆಮ್ಮದಿ ಕೇಂದ್ರದಲ್ಲಿ‌ ದೊರೆಯುವ ವಿವಿಧ ಅಗತ್ಯ ದಾಖಲೆಗಳನ್ನು ಪಡೆಯಲು ಅಲ್ಲಿನ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ದೇವನಹಳ್ಳಿ ಗ್ರಾಮ ಪಂಚಾಯತ್​ ಸೇರಿದಂತೆ ಶಾಲೆ, ಅಂಗನವಾಡಿ, ಹತ್ತಾರೂ ಅಂಗಡಿಗಳನ್ನು ಹೊಂದಿರುವ ಡಿಪೋ ಬೈಲ್ ಮಜರೆ ಈಗ ಸರ್ಕಾರಿ ಅಧಿಕೃತ ವೆಬ್​ಸೈಟ್​ನಲ್ಲಿ ಮಾಯವಾಗಿದೆ. ಕಳೆದ ಒಂದು ವರ್ಷದಿಂದ ಈ‌ ಸಮಸ್ಯೆ ಆರಂಭವಾಗಿದೆ ಎನ್ನಲಾಗಿದ್ದು, ನೂರಾರು ಜನರ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.

ದೇವನಹಳ್ಳಿ ಗ್ರಾಮದ ಡಿಪೋಬೈಲ್ ಮಜರೆ ಸರ್ಕಾರಿ ವೆಬ್​ಸೈಟ್​ನಲ್ಲಿ ನಾಪತ್ತೆಯಾಗಿದ್ದು, ದಾಖಲೆಗಳನ್ನು ಪಡೆಯಲು ಅಲ್ಲಿನ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಾತಿ ಆದಾಯ ಪ್ರಮಾಣ ಪತ್ರ, ಆದಾಯ, ವಂಶಾವಳಿ, ಆಧಾರ್ ಸೇರಿದಂತೆ ಆನ್​ಲೈನ್ ಮುಖಾಂತರ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಪಡೆಯುವ ಸುಮಾರು 7 ಪ್ರಮಾಣ ಪತ್ರಗಳಿಗೆ ಮಜರೆ ಇಲ್ಲದೇ ಹೋದಲ್ಲಿ ತೊಂದರೆ ಎದುರಾಗಲಿದೆ. ಒಂದೊಮ್ಮೆ ಪ್ರಮಾಣ ಪತ್ರ ದೊರೆತರೂ ವಿಳಾಸ ಸರಿಯಾಗಿ ನಮೂದಾಗದೇ ಕೇವಲ ಗ್ರಾಮ ಮಾತ್ರ ಸಿಗಲಿದ್ದು, ಸರ್ಕಾರದ ಯೋಜನೆಗಳನ್ನು ಪಡೆಯಲು ಸಮಸ್ಯೆಯಾಗಲಿದೆ.

ಸುಮಾರು 35 ಕುಟುಂಬಗಳನ್ನು ಹಾಗೂ 175 ಮತಗಳನ್ನು ಹೊಂದಿರುವ ಮಜರೆ ಕಳೆದ ವರ್ಷದವರೆಗೆ ಸರ್ಕಾರಿ ದಾಖಲೆಯಲ್ಲಿತ್ತು. ಆದರೆ ಈಗ ವೆಬ್​ಸೈಟ್​ನಲ್ಲಿ ಮಜರೆಯ ಹೆಸರು ನಮೂದಿಸಿದಲ್ಲಿ ಯಾವುದೇ ಫಲಿತಾಂಶ ತೋರಿಸುವುದಿಲ್ಲ. ಸಮೀಪದ ಅಮ್ಮೀನಳ್ಳಿ ನೆಮ್ಮದಿ ಕೇಂದ್ರಕ್ಕೆ ತೆರಳಿ ವಾಸ್ತವ್ಯ ಪ್ರಮಾಣ ಪತ್ರಕ್ಕೆ ಅರ್ಜಿ ನೀಡಿದಾಗ ಡಿಪು ಬೈಲ್ ಮಜರೆ ಇಲ್ಲದಿರುವುದು ತಿಳಿಯಿತು ಎಂದು ಸ್ಥಳೀಯರು ತಿಳಿಸಿದರು.

ಇನ್ನು ಗ್ರಾಮಸ್ಥರು ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಅನುಭವಿಸುತ್ತಿದ್ದು, ಈ ಕುರಿತು ತಹಶೀಲ್ದಾರ ಅವರಿಗೂ ಮನವಿ ಸಲ್ಲಿಸಿದ್ದಾರೆ. ಇದು ಗ್ರಾಮಸ್ಥರ ಅಸ್ತಿತ್ವದ ಪ್ರಶ್ನೆಯಾಗಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ABOUT THE AUTHOR

...view details