ಶಿರಸಿ :ಕೊರೊನಾ ನಂತರದ ಕಾಲಘಟ್ಟದಲ್ಲಿ ಮಕ್ಕಳಿಗೆ ವಿದ್ಯೆ ಕಲಿಸಲು ಸಾಕಷ್ಟು ಕಸರತ್ತು ಮಾಡಲಾಗುತ್ತಿದೆ. ಆಟೋಟದ ಜೊತೆಗೇ ಪಾಠ ಮಾಡಿ ಅವರನ್ನು ಕಲಿಕೆಯತ್ತ ಗಮನ ಹರಿಸುವಂತೆ ಮಾಡಲಾಗುತ್ತಿದೆ. ಅದರಲ್ಲಿಯೇ ವಿಶೇಷ ಎಂಬಂತೆ ಶಿರಸಿಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗಾಗಿ ಗಣಿತ ಕಲಿಸಲು ಯಕ್ಷಗಾನ ತಾಳಮದ್ದಳೆಗೆ ಮೊರೆ ಹೋಗಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮಾರಿಕಾಂಬ ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನದ ತಾಳಮದ್ದಳೆಯ ಮೂಲಕ ಮಕ್ಕಳಿಗೆ ಗಣಿತವನ್ನು ಸರಳ ರೂಪದಲ್ಲಿ ಕಥೆ ಹೇಳುತ್ತಾ ವಿವರಿಸಲಾಗುತಿದ್ದು, ಈ ಮೂಲಕ ಕ್ಲಿಷ್ಟ ಗಣಿತವನ್ನು ಮಕ್ಕಳಿಗೆ ಸರಳವಾಗಿಸುವ ಪ್ರಯತ್ನವನ್ನು ಸುಳ್ಯದ ಪ್ರಜ್ಞಾ ಯಕ್ಷಗಾನ ಕಲಾ ಶಾಲೆ ತಂಡ ಮಾಡುತ್ತಿದೆ. ಗಣಿತದ ಪ್ರಕಾರಗಳು, ಕೂಡಿ ಕಳೆಯುವ, ಭಾಗಿಸುವ ವಿಧಾನ ಹೀಗೆ ಪ್ರತಿಯೊಂದನ್ನೂ ತಾಳೆ ಮದ್ದಳೆಯಲ್ಲಿ ಕಥೆಯನ್ನು ವಿವರಿಸಿ ಹೇಳುವ ಮೂಲಕ ಮಕ್ಕಳಿಗೆ ತಿಳಿಸಲಾಯಿತು.