ಭಟ್ಕಳ: ಗೃಹಿಣಿವೋರ್ವಳು ತನ್ನ ಪತಿಯ ಕಿರುಕುಳ ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ತಾಲೂಕಿನ ಬೆಳೆಕೆ ಪಂಚಾಯತ್ ನೂಜದ ಅಡಿಬಾರ ಎಂಬಲ್ಲಿ ನಡೆದಿದೆ.
ಪತಿ ಕಿರುಕುಳ ತಾಳಲಾರದೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ - ಪತಿಯ ಕಿರುಕುಳಕ್ಕೆ ಪತ್ನಿ ಕೆರೆಗೆ ಹಾರಿ ಆತ್ಮಹತ್ಯೆ
ಭಟ್ಕಳದಲ್ಲಿ ಪತಿಯ ಕಿರುಕುಳ ತಾಳಲಾರದೆ ಮಹಿಳೆಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇಂದಿರಾ ನಾಗರಾಜ ಗೊಂಡ (26) ಮೃತ ಮಹಿಳೆ. ಇವರು ನೂಜದ ಅಡಿಬಾರ ನಿವಾಸಿ. ಇದೇ ವರ್ಷದ ಮೇ 24 ರಂದು ನಾಗರಾಜ ಸೋಮಯ್ಯ ಗೊಂಡನ ಎಂಬಾತನ ಜೊತೆ ಗುರು ಹಿರಿಯರ ನಿಶ್ಚಿಯದಂತೆ ಮದುವೆಯಾಗಿತ್ತು. ವಿವಾಹದ ಬಳಿಕ ಪತಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಪದೇ ಪದೇ ಬಾವಿಗೆ ಬಿದ್ದು ಸಾಯಿ ಎಂದು ನಿಂದಿಸುತ್ತಿದ್ದ ಎನ್ನಲಾಗ್ತಿದೆ. ಅದರಂತೆ ಕಳೆದ ಗುರುವಾರ ಬೆಳಗ್ಗೆ ಮನೆಯ ಪಕ್ಕದ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗ್ತಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮದುವೆಯಾದ ಒಂದು ತಿಂಗಳಲ್ಲಿಯೇ ಪತಿ ಕಿರುಕುಳ ನೀಡುತ್ತಿದ್ದ ಬಗ್ಗೆ ತನ್ನ ಸಹೋದರನಿಗೆ ಈಕೆ ಮಹಿಳೆ ತಿಳಿಸಿದ್ದಳು. ಈಗಾಗಲೇ 2-3 ಬಾರಿ ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನ ಕೂಡ ನಡೆಸಲಾಗಿತ್ತಂತೆ. ಆದ್ರೆ ಇದೆಲ್ಲವೂ ವಿಫಲವಾಗಿದೆ ಎಂದು ಆಕೆಯ ಸಹೋದರ ತಿಳಿಸಿದ್ದಾರೆ.