ಶಿರಸಿ :ಬಿಎಸ್ಎನ್ಎಲ್ ಮೊಬೈಲ್ ಸೇವೆಯಿಂದ ರೋಸಿ ಹೋದ ಜನತೆ ಮೊಬೈಲ್ ಟವರ್ ಸಿಗ್ನಲ್ ಬರಲು ಜನರೇಟರ್ಗೆ ಡೀಸೆಲ್ ದಾನ ನೀಡಿ ಎಂದು ಅಣಕು ರೂಪದಲ್ಲಿ ಪ್ರತಿಭಟಿಸಿದ ಘಟನೆ ತಾಲೂಕಿನ ತಾರಗೋಡಿನಲ್ಲಿ ನಡೆದಿದೆ.
ಬಿಎಸ್ಎನ್ಎಲ್ ಸೇವೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ ತಾರಗೋಡಿನ ಜನತೆ - Maragodu village people outrage against BSNL service
ಬಿಎಸ್ಎನ್ಎಲ್ ಮೊಬೈಲ್ ಸೇವೆಯಿಂದ ರೋಸಿ ಹೋದ ಜನತೆ ಮೊಬೈಲ್ ಟವರ್ ಸಿಗ್ನಲ್ ಬರಲು ಜನರೇಟರ್ಗೆ ಡೀಸೆಲ್ ದಾನ ನೀಡಿ ಎಂದು ಅಣಕು ರೂಪದಲ್ಲಿ ತಾಲೂಕಿನ ತಾರಗೋಡಿನಲ್ಲಿ ಜನತೆ ಪ್ರತಿಭಟಿಸಿದ್ದಾರೆ.
Maragodu village people outrage against BSNL service at Sirsi
ತಾರಗೋಡ ಗ್ರಾಮದ ಕೈಲಾಸ ಗುಡ್ಡದಲ್ಲಿ ಬಿಎಸ್ಎನ್ಎಲ್ ಟವರ್ ಇದೆ. ಆದರೆ ಇದು ಕರೆಂಟ್ ಇದ್ದರೆ ಮಾತ್ರ ಸಿಗ್ನಲ್ ನೀಡುತ್ತದೆ. ಹಾಗಾಗಿ ಜನರೇಟರ್ ಇಟ್ಟಿದ್ದು, ಅದಕ್ಕೆ ಡಿಸೆಲ್ ಕೊರತೆಯಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಜನರೇಟರ್ ಆನ್ ಮಾಡಲು ಕುದ್ದು ದಾನಿಗಳ ಮೊರೆ ಹೋಗಿದ್ದು, ಊರಿನ ರಸ್ತೆ ಮುಂದೆ ಕಾಲಿ ಡಿಸೆಲ್ ಬ್ಯಾರಲ್ ಇಟ್ಟು ಅದರ ಮೇಲೆ ಬಿಎಸ್ಎನ್ಎಲ್ ಟವರ್ ಜನರೇಟರ್ಗೆ ಡೀಸೆಲ್ ಬೇಕಾಗಿದೆ. ದಾನಿಗಳು ಬ್ಯಾರಲ್ಗೆ ಡೀಸೆಲ್ ದಾನ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.
TAGGED:
Sirsi latest news