ಕರ್ನಾಟಕ

karnataka

ETV Bharat / state

ಮಾವು ತಳಿಗಳ ಸಂರಕ್ಷಣೆಗೆ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಾಗಾರ - ಶಿರಸಿ

ಮಲೆನಾಡಿನ ವಿನಾಶದ ಅಂಚಿನ ಸ್ಥಳೀಯ ಮಾವು ತಳಿಗಳನ್ನು ಗುರುತಿಸಿ ಅವುಗಳನ್ನು ಬೆಳೆಸುವ ಕಾರ್ಯ ಆಗಬೇಕು. ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಗಳು ವಿನಾಶದಂಚಿನ ಸ್ಥಳೀಯ ತಳಿಗಳ ಗಿಡಗಳನ್ನು ನರ್ಸರಿಗಳಲ್ಲಿ ತಯಾರಿಸಲು ಆದ್ಯತೆ ನೀಡಬೇಕು..

Mango breed conservation worshop
ಮಾವು ವೈವಿಧ್ಯ ಸಂರಕ್ಷಣಾ ಕಾರ್ಯಗಾರ

By

Published : Sep 11, 2020, 10:18 PM IST

ಶಿರಸಿ :ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ, ಕದಂಬ ಸಾವಯವ ಮತ್ತು ಮಾರ್ಕೇಟಿಂಗ್ ಸಂಸ್ಥೆ, ಜಿಲ್ಲಾ ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ, ಅರಣ್ಯ ಕಾಲೇಜು, ತೋಟಗಾರಿಕಾ ಕಾಲೇಜು, ಕೃಷಿ ವಿಜ್ಞಾನ ಕೇಂದ್ರ ಇವರ ಜಂಟಿ ಸಂಯುಕ್ತ ಆಶ್ರಯದಲ್ಲಿ ಮಾವು ವೈವಿಧ್ಯ ಸಂರಕ್ಷಣಾ ಕಾರ್ಯಾಗಾರ ನಡೆಯಿತು.

ನಗರದ ಕದಂಬ ಮಾರ್ಕೇಟಿಂಗ್ ಸಭಾಂಗಣದಲ್ಲಿ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಅಧ್ಯಕ್ಷತೆಯಲ್ಲಿ ಇಂದು ಆಯೋಜಿಸಿದ್ದ ಸಭೆಯಲ್ಲಿ, ಮಲೆನಾಡಿನ ವಿನಾಶದ ಅಂಚಿನ ಸ್ಥಳೀಯ ಮಾವು ತಳಿಗಳನ್ನು ಗುರುತಿಸಬೇಕು. ಈ ತಳಿಗಳನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. ಹಲವು ಸ್ಥಳೀಯ ತಳಿಗಳು ಕಣ್ಮರೆಯಾಗಿವೆ. ವಿನಾಶದ ಅಂಚಿನಲ್ಲಿದೆ ಎಂದು ಕಳವಳ ವ್ಯಕ್ತಪಡಿಸಲಾಯಿತು.

ಮಾವು ವೈವಿಧ್ಯ ಸಂರಕ್ಷಣಾ ಕಾರ್ಯಾಗಾರ

ನಿರ್ಣಯ :ಮಾವು ತಳಿಗಳ ರಕ್ಷಣೆಗೆ ಹಲವು ನಿರ್ಣಯ ಕೈಗೊಳ್ಳಲಾಗಿದೆ. ಅಪರೂಪದ ಮಾವಿನ ತಳಿಗಳು ವಿನಾಶದಂಚಿಗೆ ತಲುಪಿವೆ. ಹಾಗಾಗಿ, ಅಂತಹ ತಳಿಗಳ ತಾಯಿ ಮರ ಕಟಾವಿಗೆ ಯಾರಿಗೂ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಯಿತು. ಅಪರೂಪದ ಮಾವಿನ ತಳಿಗಳ ರಕ್ಷಣೆ ಹಿನ್ನೆಲೆ ಅರಣ್ಯ ಇಲಾಖೆಯು ಅಂತಹ ತಳಿಗಳ ತಾಯಿ ಮರಗಳ ಕಟಾವಿಗೆ ಕಡ್ಡಾಯ ಅವಕಾಶ ನೀಡಬಾರದು ಎಂಬ ಒತ್ತಾಯ ಕೇಳಿ ಬಂದಿತು.

ಮಲೆನಾಡಿನ ವಿನಾಶದ ಅಂಚಿನ ಸ್ಥಳೀಯ ಮಾವು ತಳಿಗಳನ್ನು ಗುರುತಿಸಿ ಅವುಗಳನ್ನು ಬೆಳೆಸುವ ಕಾರ್ಯ ಆಗಬೇಕು. ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಗಳು ವಿನಾಶದಂಚಿನ ಸ್ಥಳೀಯ ತಳಿಗಳ ಗಿಡಗಳನ್ನು ನರ್ಸರಿಗಳಲ್ಲಿ ತಯಾರಿಸಲು ಆದ್ಯತೆ ನೀಡಬೇಕು. ಪ್ರಸಕ್ತ ವರ್ಷ 2 ಲಕ್ಷ ಗಿಡಗಳನ್ನು ಉತ್ತರ ಕನ್ನಡದ ಆಸಕ್ತ ರೈತರಿಗೆ ಅರಣ್ಯ ಇಲಾಖೆ ವಿತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ರೈತರು ತಮ್ಮ ಸೊಪ್ಪಿನ ಬೆಟ್ಟಗಳಲ್ಲಿ ಮಾವಿನ ಗಿಡಗಳನ್ನು ನೆಡಲು ಮುಂದಾಗಬೇಕು. 1 ಸಾವಿರ ರೈತರು ಬೆಟ್ಟದಲ್ಲಿ ಸ್ಥಳೀಯ ಜಾತಿಗಳ ಮಾವಿನ ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಕ್ರಮವಹಿಸಬೇಕು. ಜೀವ ವೈವಿಧ್ಯ ಮಂಡಳಿ, ಅರಣ್ಯ ಕಾಲೇಜು, ಕದಂಬ ಮುಂತಾದ ಸಂಸ್ಥೆಗಳು ಮಾವಿನ ಹಳೆಯ ತಾಯಿ ಮರಗಳನ್ನು ಗುರುತಿಸುವ ಯೋಜನೆ ರೂಪಿಸಬೇಕು. ಅವುಗಳ ಸಂರಕ್ಷಣೆಗೆ ಜಾಗೃತಿ ಮೂಡಿಸಬೇಕು.

ಅಧ್ಯಯನ ಸಮೀಕ್ಷೆ ನಡೆಸಿ ವಿನಾಶದಂಚಿನ ತಳಿಗಳನ್ನು ಉಳಿಸಲು ಮುಂದಾಗಬೇಕು. ಸ್ಥಾನೀಯ ಮಾವು ತಳಿ ಸಂವರ್ಧನೆ ಕುರಿತು ರೈತರ ಸಮಾವೇಶ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ರೈತರು, ಅಧಿಕಾರಿಗಳು, ಪರಿಸರ ಕಾರ್ಯಕರ್ತರು, ಮಾವು ತಳಿ ತಜ್ಞರು ನಿರ್ಣಯಿಸಿದರು.

ABOUT THE AUTHOR

...view details