ಕರ್ನಾಟಕ

karnataka

ETV Bharat / state

ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ವೃದ್ಧನ ಹತ್ಯೆ: ಒಡಿಶಾ ಮೂಲದ ಆರೋಪಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು - karawara murder case

ಕ್ಷುಲ್ಲಕ ಕಾರಣಕ್ಕೆ ವೃದ್ಧನೊಂದಿಗೆ ಜಗಳವಾಡಿದ ಒಡಿಶಾ ಮೂಲದ ಕೆಲಸಗಾರ ರಾಡ್​ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

man murdered old man at karawara
ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ವೃದ್ಧನ ಹತ್ಯೆ

By

Published : Sep 24, 2021, 11:50 AM IST

Updated : Sep 24, 2021, 12:11 PM IST

ಕಾರವಾರ: ಕ್ಷುಲ್ಲಕ ಕಾರಣಕ್ಕೆ ವೃದ್ಧನೊಂದಿಗೆ ಜಗಳವಾಡಿದ ಒಡಿಶಾ ಮೂಲದ ಕೆಲಸಗಾರ ರಾಡ್​ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಇಂದು ಮುಂಜಾನೆ ಗೋಕರ್ಣದ ತದಡಿಯಲ್ಲಿ ನಡೆದಿದೆ. ತದಡಿಯ ವಿವೇಕಾನಂದ ಶಾನಭಾಗ್(70) ಮೃತ ವ್ಯಕ್ತಿ.

ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ವೃದ್ಧನ ಹತ್ಯೆ

ಇಂದು ಮನೆಯ ಮೇಲ್ಮಹಡಿಯಲ್ಲಿ ವೃದ್ಧ ಹಾಗೂ ಒಡಿಶಾ ಮೂಲದ ಕೆಲಸಗಾರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಈ ವೇಳೆ ಒಡಿಶಾ ಮೂಲದ ವ್ಯಕ್ತಿ ರಾಡ್​​ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ನಂತರ ಗಂಭೀರ ಗಾಯಗೊಂಡವರನ್ನು ತಕ್ಷಣ 108ರ ಮೂಲಕ ಕುಮಟಾ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲು ಸಾಗಿಸಲಾಗಿತ್ತಾದರೂ ಅಷ್ಟರಲ್ಲಿಯೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ಮಳೆಗಾಗಿ ಪ್ರಾರ್ಥನೆ: ಕೆರೆಯಲ್ಲಿ ಹೋಮ - ಹವನ ನಡೆಸಿದ ಗ್ರಾಮಸ್ಥರು

ಆರೋಪಿಯು ಸಮುದ್ರದಲ್ಲಿ ಈಜಾಡಿಕೊಂಡು ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 24, 2021, 12:11 PM IST

ABOUT THE AUTHOR

...view details