ಕರ್ನಾಟಕ

karnataka

ETV Bharat / state

ಭಯೋತ್ಪಾದನೆ ಆರೋಪ.. ಏಳು ವರ್ಷದಿಂದ ಜೈಲಿನಲ್ಲಿದ್ದ ಭಟ್ಕಳದ ವ್ಯಕ್ತಿ ನ್ಯಾಯಾಲಯದಿಂದ ಖುಲಾಸೆ - ETV Bharat kannada News

2007 ರಲ್ಲಿ ದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂದು ಆರೋಪಿಸಿದ ಭಟ್ಕಳ ವ್ಯಕ್ತಿ ಸೋಮವಾರ ಬಿಡುಗಡೆ ಆಗಲಿದ್ದಾರೆ.

Abdul Wahid Siddibapa of Bhatkal
ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಾಪ

By

Published : Apr 2, 2023, 9:50 PM IST

ಭಟ್ಕಳ (ಉತ್ತರ ಕನ್ನಡ) : ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಾಪಾ ಎಂಬವರನ್ನು ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ ಬಿಡುಗಡೆಗೆ ಆದೇಶ ಹೊರಡಿಸಿದೆ. ನಿಷೇಧಿತ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸದಸ್ಯ ಹಾಗೂ 2007 ರಲ್ಲಿ ದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎಂದು ಆರೋಪಿಸಿ ಭಯೋತ್ಪಾದಕ ಚಟುವಟಿಕೆ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಸಿದ್ದಿಬಾಪಾ ಅವರನ್ನು ಏಳು ವರ್ಷಗಳ ಹಿಂದೆ ಅಂದರೆ 2016ರಲ್ಲಿ ಬಂಧಿಸಿತ್ತು.

ಇದೀಗ ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯ ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಾಪಾ ಅವರನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ. ಈ ಬಗ್ಗೆ ವಿಚಾರಣಾಧೀನ ಕೈದಿಗಳಿಗೆ ಕಾನೂನು ನೆರವು ನೀಡುವ ಸಂಘಟನೆಯಾದ ಜಮೀಯತ್ ಉಲಮಾ ಹಿಂದ್​ನ ಕಾನೂನು ನೆರವು ಸಮಿತಿಯ ಮುಖ್ಯಸ್ಥ ಗುಲ್ಝಾರ್ ಅಝ್ಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಓದು ಕೇವಲ 5ನೇ ತರಗತಿ, 3 ದೇಶಗಳಲ್ಲಿ 4 ಮದುವೆ! ಇದು ಶಂಕಿತ ಉಗ್ರನ ಹಿಸ್ಟರಿ

ಪ್ರಕರಣದ ಹಿನ್ನೆಲೆ ಏನು? : ಅಬ್ದುಲ್ ವಾಹಿದ್ ಸಿದ್ದಿಬಾಪಾ ಅವರನ್ನು ಮೇ 20, 2016ರಂದು ಹೊಸದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್ಐಎ ತಂಡ ಬಂಧಿಸಿತ್ತು. ಸಿದ್ದಿಬಾಪಾರನ್ನು 2013ರ ಫೆಬ್ರವರಿ 21ರಂದು ಹೈದರಾಬಾದ್‌ನ ದಿಲ್​ಸುಖ್​ ನಗರದಲ್ಲಿ 18 ಜೀವಬಲಿ ಪಡೆದ ಅವಳಿ ಬಾಂಬ್‌ ಸ್ಫೋಟ ಪ್ರಕರಣ ಪ್ರಮಖ ಉಗ್ರಗಾಮಿ ಆರೋಪಿಯಾಗಿದ್ದ, ಹಾಗು ನಿಷೇಧಿತ ಸಂಘಟನೆಯಾದ ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಯಾಸೀನ್ ಭಟ್ಕಳ್ ಸಂಬಂಧಿ ಎಂದು ಆರೋಪಿಸಲಾಗಿತ್ತು.

ಈ ಹಿಂದೆ ವಾಹಿದ್ ಸಿದ್ದಿಬಾಪಾ ಅವರು ದುಬೈನಲ್ಲಿ ನೆಲೆಸಿದ್ದಾಗ ಜನರನ್ನು ನಿಷೇಧಿತ ಸಂಘಟನೆಗೆ ಸೇರುವಂತೆ ಮನವೊಲಿಸುತ್ತಿದ್ದರು. ಅಲ್ಲದೇ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ದುಬೈನಲ್ಲಿ ಹಣ ಸಂಗ್ರಹಿಸಿದ್ದಾರೆಂಬ ಆರೋಪವನ್ನೂ ಎನ್​ಐಎ ಹೊರಿಸಿತ್ತು. ಆದರೆ ಪಟಿಯಾಲ ಹೌಸ್ ಸೆಷನ್ ಕೋರ್ಟ್ ಅವರ ವಿರುದ್ಧದ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಅವರನ್ನು ಖುಲಾಸೆಗೊಳಿಸಿದೆ ಮತ್ತು ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.

ಇದನ್ನೂ :ಕುಕ್ಕರ್ ಬಾಂಬರ್‌ ಶಾರೀಕ್ ಟ್ರಾವೆಲ್ ಹಿಸ್ಟರಿ ಕಲೆಹಾಕುತ್ತಿರುವ ಪೊಲೀಸರು

ಇನ್ನು ಈ ಕುರಿತು ಮಾತನಾಡಿರುವ ಸಿದ್ದಿಬಾಪಾ ಬಂಧನದ ಬಳಿಕ ಮೊದಲ ದಿನದಿಂದ ಪ್ರಕರಣವನ್ನು ನಿರ್ವಹಿಸುತ್ತಿದ್ದ ವಕೀಲ ಎಂ.ಎಸ್ ಖಾನ್​ ಅವರು, ತನ್ನ ಕಕ್ಷಿದಾರ ನಿರಪರಾಧಿ ಮತ್ತು ಸುಳ್ಳು ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಾನೆ ಎಂಬುದು ತಿಳಿದಿತ್ತು. ಈಗ ಆತ ನಿರಪರಾಧಿ ಎಂದು ಸಾಬೀತಾಗಿರುವುದು ಸಂತೋಷವಾಗಿದ್ದು, ಏಳು ವರ್ಷದ ನಂತರ ಸೋಮವಾರ ಜೈಲಿನಿಂದ ಹೊರಬರಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಎರಡೂವರೆ ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಂಕಿತ ಉಗ್ರ

ABOUT THE AUTHOR

...view details