ಕರ್ನಾಟಕ

karnataka

ETV Bharat / state

WATCH: ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಪ್ರವಾಸಿಗ.. ನೋಡ ನೋಡುತ್ತಲೇ ಕೊಚ್ಚಿ ಹೋದ ವ್ಯಕ್ತಿ! - uttarakannada news

ಸಮುದ್ರದ ಸಮೀಪ ಕಲ್ಲುಗಳಿಗೆ ಅಪ್ಪಳಿಸುತ್ತಿದ್ದ ಅಲೆಗಳನ್ನು ನೋಡಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಅದರಲ್ಲಿ ಕುಮಾರ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಅಲೆ ಅಪ್ಪಳಿಸಿ ನೀರಿಗೆ ಬಿದ್ದಿದ್ದಾನೆ. ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆ‌ ಶೋಧಕಾರ್ಯ ಸಾಧ್ಯವಾಗದೇ ಲೈಫ್ ಗಾರ್ಡ್ ಸಿಬ್ಬಂದಿ ವಾಪಸ್​ ಆಗಿದ್ದಾರೆ.

Man flow with sea water in Karwar
ನೋಡ ನೋಡುತ್ತಲೇ ಕೊಚ್ಚಿ ಹೋದ ವ್ಯಕ್ತಿ

By

Published : Aug 21, 2021, 5:11 PM IST

Updated : Aug 21, 2021, 5:24 PM IST

ಕಾರವಾರ:ಸೆಲ್ಫಿ ತೆಗೆಯಲು ಹೋದ ಪ್ರವಾಸಿಗನೊಬ್ಬ ನೋಡ ನೋಡುತ್ತಲೇ ಸಮುದ್ರಪಾಲಾಗಿರುವ ಘಟನೆ ಗೋಕರ್ಣದ ಓಂ ಬೀಚ್​ನಲ್ಲಿ ಇಂದು ನಡೆದಿದೆ.

ನೋಡ ನೋಡುತ್ತಲೇ ಕೊಚ್ಚಿ ಹೋದ ವ್ಯಕ್ತಿ

ಹಾನಗಲ್ ಮೂಲದ ಕುಮಾರ ಶೇಕಪ್ಪ ಕಮಾಟಿ (35) ಕಣ್ಮರೆಯಾದ ಪ್ರವಾಸಿಗ. ಹಾನಗಲ್‌ನಿಂದ ಪ್ರವಾಸಕ್ಕೆಂದು ಒಟ್ಟು 12 ಮಂದಿ ಸೇರಿ ಬಂದಿದ್ದರು. ಸಮುದ್ರದ ಸಮೀಪ ಕಲ್ಲುಗಳಿಗೆ ಅಪ್ಪಳಿಸುತ್ತಿದ್ದ ಅಲೆಗಳನ್ನು ನೋಡಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು.

ಅದರಲ್ಲಿ ಕುಮಾರ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಅಲೆ ಅಪ್ಪಳಿಸಿ ನೀರಿಗೆ ಬಿದ್ದಿದ್ದಾನೆ. ತಕ್ಷಣ ಕೂಗಿಕೊಂಡಿದ್ದು ಕೂಡಲೇ ಲೈಫ್‌ ಗಾರ್ಡ್ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದರು. ಆದರೆ, ಅಲೆಗಳ ಅಬ್ಬರಕ್ಕೆ ಆತ ಕೊಚ್ಚಿಕೊಂಡು ಬಹುದೂರ ಹೋಗಿದ್ದಾನೆ. ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನೆಲೆ‌ ಶೋಧಕಾರ್ಯ ಸಾಧ್ಯವಾಗದೇ ಲೈಫ್ ಗಾರ್ಡ್ ಸಿಬ್ಬಂದಿ ವಾಪಸ್​ ಆಗಿದ್ದಾರೆ.

ಆದರೆ, ಈ ಎಲ್ಲ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ರಕ್ಷಣೆಗೆ ತೆರಳಿದ ಲೈಫ್ ಗಾರ್ಡ್ ಗಾಯಗೊಂಡಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Aug 21, 2021, 5:24 PM IST

For All Latest Updates

ABOUT THE AUTHOR

...view details